RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ:ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸ್ವರ್ಧೆ ಅತ್ಯವಶ್ಯಕವಾಗಿದೆ : ಅಜೀತ ಮನ್ನಿಕೇರಿ

ಮೂಡಲಗಿ:ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸ್ವರ್ಧೆ ಅತ್ಯವಶ್ಯಕವಾಗಿದೆ : ಅಜೀತ ಮನ್ನಿಕೇರಿ 

ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸ್ವರ್ಧೆ ಅತ್ಯವಶ್ಯಕವಾಗಿದೆ : ಅಜೀತ ಮನ್ನಿಕೇರಿ

 

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 15 :

 

 

ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸ್ಪರ್ಧಾತ್ಮಕತೆ ಅತ್ಯವಶ್ಯಕವಾಗಿದೆ. ಮಗುವಿನ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢಗೋಳ್ಳಲು ಪಾಠದ ಜೊತೆಯಲ್ಲಿ ಆಟಕ್ಕೆ ಪ್ರಾಮುಖ್ಯತೆ ನೀಡಿದಾಗ ಮಗುವಿನ ವ್ಯಕ್ತಿತ್ವ ವಿಕಸನಗೋಳ್ಳುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ಸಮೀಪದ ಬಗರನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಬೆಟಗೇರಿ ಸಮೂಹ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಗುವಿನ ಕಲಿಕೆಯ ಫಲದಾಯಕವಾಗ ಬೇಕಾದರೆ ಶಾರೀರಿಕವಾಗಿ ಸದೃಢರಿದ್ದಾಗ ಮಾತ್ರ ಸಾಧ್ಯವಾಗುವದು. ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಮೊಬೈಲ್ ಮಿತಿ ಮೀರಿ ಬಳಕೆ ಮಾಡುತ್ತಿದ್ದು ಇದರಿಂದ ಆಟಪಾಠಗಳಿಗೆ ದಕ್ಕೆಯಾಗುತ್ತಿದೆ. ಕೇವಲ ಪಠ್ಯ ಪುಸ್ತಕಕ್ಕೆ ಸಿಮಿತಗೋಳಿಸದೆ ಆಟ, ಪಾಠ, ಮೊಜಿನ ಆಟಗಳು, ಪ್ರಸಕ್ತ ದಿನಗಳಲ್ಲಿ ಶಾರೀರಿಕವಾಗಿ ಉತ್ತಮ ದೇಹ ಹೊಂದಲು ತೆಗೆದುಕೋಳ್ಳ ಬಹುದಾದ ಮುಂಜಾಗೃತ ಕ್ರಮಗಳನ್ನು ಮಗುವಿಗೆ ತಿಳಿಸಬೇಕು. ಪಾಲಕರು ಪೋಷಕರು ಮನೆಯ ಪರಿಸರದಲ್ಲಿ ಆರೋಗ್ಯ ಉತ್ತಮಪಡಿಸುವ ಆಹಾರ ಕ್ರಮ, ಜೀವನ ಶೈಲಿ, ವ್ಯಯಕ್ತಿಕ ಸ್ವಚ್ಚತೆ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಮೂಡಲಗಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಆರ್ ತರಕಾರ, ಮುಖ್ಯೋಪಾಧ್ಯಾಯ ಆರ್ ಎಸ್ ಅಳಗುಂಡಿ ಮಾತನಾಡಿ, ಮಕ್ಕಳಲ್ಲಿಯ ಸೂಪ್ತ ಪ್ರತಿಭೆ ಗುರುತಿಸಲು ಪೈಪೋಟಿ ಅತ್ಯಾವಶ್ಯಕ. ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಮಿಂಚ ಬೇಕಾದರೆ ಕಠೀಣ ಪರಿಶ್ರಮದ ಅವಶ್ಯಕತೆ ಇದೆ. ಪಾಲಕರು ಶಿಕ್ಷಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಕೈಗೋಳ್ಳ ಬಹುದಾದ ಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಶೀವಲಿಂಗ ಬಳಿಗಾರ, ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಮಪ್ಪ ತಳವಾರ, ಮಾಜಿ ಅಧ್ಯಕ್ಷ ಸುಭಾಸ ಹಾವಾಡಿ, ಪ್ರಧಾನ ಗುರುಗಳಾದ ಆರ್.ಎಸ್ ಕಲ್ಲಪ್ಪನವರ, ಎಮ್.ಬಿ ಕಳ್ಳಇÀುದ್ದಿ, ಆರ್.ಬಿ ಬೆಟಗೇರಿ, ಐ.ಸಿ ಕೊಣ್ಣೂರ, ಬಿ.ಎ ಕೋಟಿ, ಐ.ಸಿ ಹಸಬಿ, ಎಸ್ ಎಚ್ ಹಳ್ಳೂರ,ಎ.ಎಮ್ ನಗಾರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಎಮ್ ಎಲ್ ವಗ್ಗರ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಮಂಜು ತಳವಾರ ನಿರೂಪಿಸಿದರು. ಸೇವಾ ನಿರತ ಪದವೀಧರ ಸಂಘದ ಅಧ್ಯಕ್ಷ ಪಿ.ಎಮ್ ಕುರಬೇಟ ಸ್ವಾಗತಿಸಿ ಸಿ.ಆರ್.ಪಿ ಬಿ.ಟಿ ಪುಂಜಿ ವಂದಿಸಿದರು.

Related posts: