RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಕನಸು ಫೌಂಡೇಶನ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಆಚರಣೆ

ಗೋಕಾಕ:ಕನಸು ಫೌಂಡೇಶನ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಆಚರಣೆ 

ಕನಸು ಫೌಂಡೇಶನ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಆಚರಣೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 16 :
ಸ್ಥಳೀಯ ಕನಸು ಫೌಂಡೇಶನ್‍ನ ಕಾರ್ಯಕರ್ತರು ತಮಗೆ ವಿದ್ಯೆ ನೀಡಿ ಜೀವನದ ಪಾಠ ಕಲಿಸಿದ ಗುರುವೃಂದಕ್ಕೆ ಗುರುವಂದನೆ ಸಲ್ಲಿಸಿದರು ಗುರುಪೂರ್ಣಿಮೆಯ ದಿನದಂದು ಸ್ಥಳೀಯ ಪ್ರತಿಷ್ಠಿತ ಆದರ್ಶ್ ಶಿಕ್ಷಣ ಸಂಸ್ಥೆಗೆ ತೆರಳಿದ ವಿದ್ಯಾರ್ಥಿಗಳು ಗುರುಗಳನ್ನು ಸತ್ಕರಿಸಿ ಗೌರವಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಆರ್.ಎಸ್.ಹೆಬ್ಬಾಳೆ ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದ್ದದು ವಿದ್ಯಾರ್ಥಿ ದಿಸೆಯಲ್ಲಿ ಬುದ್ಧಿ ಜೀವಿಗಳ ತತ್ವಾರ್ದಶಗಳನ್ನು ಪಾಲಿಸಿ ಸುಸಂಸ್ಕøತ ವ್ಯಕ್ತಿಗಳಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಹೇಳಿದರು
ಕಾರ್ಯಕ್ರಮದಲ್ಲಿ ವಿಕ್ರಂ ಕಾಕಡೆ , ಆನಂದ ಬಿಳ್ಳೂರ,ಪ್ರಕಾಶ ಕಾಗಿನಕರ, ಶ್ರೀಶೈಲ ಅಂದಾನಿ,
ಮಂಜುನಾಥ ಕೌಜಲಗಿ, ಮೇಘಾ ಬಿಳ್ಳೂರ, ಸುಶ್ಮಿತಾ ಸುಲ್ತಾನಪುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: