RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ : ಡಾ|| ಸಂಗಮನಾಥ ಲೋಕಾಪೂರ

ಗೋಕಾಕ:ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ : ಡಾ|| ಸಂಗಮನಾಥ ಲೋಕಾಪೂರ 

ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ : ಡಾ|| ಸಂಗಮನಾಥ ಲೋಕಾಪೂರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :

 

 

ನಾವು ಆಡುವ ಮಾತಗಳು ಹಿತ-ಮಿತವಾಗಿ ಇದ್ದು ಇತರರ ಮನಸ್ಸಿಗೆ ನೋವು ಆಗದಂತೆ ಇರಬೇಕೆಂದು ಬೈಲಹೊಂಗಲದ ಕಿತ್ತೂರ ರಾಣಿ ಚನ್ನಮ್ಮ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ|| ಸಂಗಮನಾಥ ಲೋಕಾಪೂರ ಹೇಳಿದರು.
ಮಂಗಳವಾರದಂದು ರಾತ್ರಿ ನಗರದ ಶೂನ್ಯ ಸಂಪಾದನಾ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಮತ್ತು ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಮಾಸಿಕ 136ನೇ ಶಿವಾನುಭಗೋಷ್ಠಿಯಲ್ಲಿ ಚಿಂತನಕಾರರಾಗಿ,ವಚನ ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರಾಗಿದ್ದು, ಕಾಯಕ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ. ಕಾಯಕ ಮತ್ತು ದಾಸೋಹ ಪದ್ಧತಿ ಎಂದೆಂದಿಗೂ ಶ್ರೇಷ್ಠ ಸಿದ್ಧಾಂತವಾಗಿವೆ. ಕನ್ನಡ ನಾಡಿನಲ್ಲಿ ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರನ್ನು ಗುರು-ಪೂರ್ಣಿಮೆ ನಿಮಿತ್ಯ ಭಕ್ತಾಧಿಗಳು ಸತ್ಕರಿಸಿ ಆಶಿರ್ವಾದ ಪಡೆದರು.
ವೇದಿಕೆ ಮೇಲೆ ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ರೊಟ್ಟಿ, ಶಕುಂತಲಾ ಕಾಪಸಿ, ನಾಗಪ್ಪ ಕಾಪಸಿ, ಎಸ್.ಎಸ್.ಮರೆನ್ನವರ, ಪ್ರೊ. ಬಸಮ್ಮ ಹಮ್ಮಣಿ, ರಾಜೇಶ್ವರಿ ಬೆಟ್ಟದಗೌಡರ ಇದ್ದರು.

Related posts: