RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದವೆ : ವಿ.ಎಸ್.ತಡಸಲೂರ

ಗೋಕಾಕ:ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದವೆ : ವಿ.ಎಸ್.ತಡಸಲೂರ 

ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದವೆ : ವಿ.ಎಸ್.ತಡಸಲೂರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 
ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದು, ಎಲ್ಲರೂ ಜಾಗೃತರಾಗಿ ಪರಿಸರ ರಕ್ಷಣೆಯತ್ತ ದಾಪುಗಾವಲು ಇಡಬೇಕಾಗಿದೆ ಎಂದು ಪೌರಾಯುಕ್ತ ವಿ.ಎಸ್.ತಡಸಲೂರ ಹೇಳಿದರು.
ಬುಧವಾರದಂದು ನಗರದ ಶ್ರೀ ಪಾಯಸಾಗರ ತಪೋಭೂಮಿಯಲ್ಲಿ ಇಲ್ಲಿಯ ದಿಗಂಬರ ಜೈನ ಸಮಾಜ ಹಾಗೂ ಅರಣ್ಯ ಇಲಾಖೆಯವರು ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮೂಲಭೂತ ಸೌಲಭ್ಯಕ್ಕಾಗಿ ಅರಣ್ಯ ನಾಶ ಪಡಿಸಿ ಇಂದು ಕಾಂಕ್ರೀಟ ನಗರಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದ ಪರಿಸರ ಅಸಮತೋಲನವಾಗಿತ್ತಿದ್ದು, ಅತಿವೃಷ್ಠಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳು ಜರುಗುತ್ತಿವೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಮಾತನಾಡಿ ಜೀವಿಗಳು ಬದುಕಲು ಅತಿ ಅವಶ್ಯವಾದ ಆಮ್ಲಜನಕ ದೊರೆಯುವುದೇ ಗಿಡ-ಮರಗಳಿಂದ. ಅರಣ್ಯವಿಲ್ಲದೇ ನಾವೆಲ್ಲ ಬದುಕಲು ಸಾಧ್ಯವಿಲ್ಲ. ಅರಣ್ಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆ ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ವಿಜಯಕುಮಾರ ಖಾರೇಪಾಟಣ, ಶ್ರೀ ಸುಪಾಶ್ರ್ವನಾಥ ಜೈನ ಯುಥ ಪೇಡರೇಶನ್ ಅಧ್ಯಕ್ಷ ರಾಜು ದರಗಶೆಟ್ಟಿ, ಶ್ರೀ ಪಾಯಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಅಂಗಡಿ, ವಾಗೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಚಂದ್ರಕಲಾ ಸೊಲ್ಲಾಪೂರೆ, ಧನ್ಯಕುಮಾರ ಕಿತ್ತೂರ ಇದ್ದರು.

Related posts: