ಗೋಕಾಕ:ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲೆಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ !
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲೆಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ !
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು.17-
ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಸುಮಾರು 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದು ಅದರಲ್ಲಿಯ ಓರ್ವ ವಿದ್ಯಾರ್ಥಿಯನ್ನು ಗೋಕಾಕ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಿದ ಘಟನೆ ಬುಧವಾರದಂದು ಜರುಗಿದೆ.
ಈ ಪ್ರೌÀಢ ಶಾಲೆಗೆ ನೀಡಲಾಗುತ್ತಿದ್ದು ಬಿಸಿಯೂಟದ ವ್ಯವಸ್ಥೆ ಸ್ಥಳೀಯ ಸ್ತ್ರೀಶಕ್ತಿ ಮಹಿಳಾ ಸಂಘಕ್ಕೆ ನೀಡಲಾಗಿದ್ದು ಅದು ಕಳೆದ ಎರಡು ವರ್ಷಗಳಿಂದ ಸರಿಯಾಗಿ ಬಿಸಿಯೂಟ ನೀಡುವದೇ ಇಲ್ಲವೆಂದು ಮಕ್ಕಳು ದೂರುತ್ತಿದ್ದಾರೆ. ಕಳೆದ 15 ದಿನಗಳಿಂದ ಸರಿಯಾದ ಸಮಯಕ್ಕೆ ಬಿಸಿಯೂಟ ನೀಡಲಾಗುತ್ತಿಲ್ಲ. ಮತ್ತು ಇಂದು ಕೂಡಾ ಬಿಸಿಯೂಟ ನೀಡಿರುವದೇ ಇಲ್ಲ. ಆಗ ವಿದ್ಯಾರ್ಥಿಗಳು ಶಾಲೆಯಿಂದ ಒಂದೂವರೆ ಕಿ.ಮೀ. ದೂರ ಇರುವ ಗ್ರಾಮ ಪಂಚಾಯತ ಕಚೇರಿಗೆ ಹೋದಾಗ ಅಲ್ಲಿಯೂ ಯಾರೂ ಇರಲಿಲ್ಲ. ಇದರಿಂದ ಒಂದೂವರೆ ಕಿ.ಮೀ. ನಡೆದು ಮಕ್ಕಳು ಹಿಂತಿರರುಗಿ ಬಂದಿದ್ದಾರೆ. ಇದರಿಂದ ಬಳಲಿ ಖಾಲಿ ಹೊಟ್ಟೆಯಿಂದ ಚುನಮರಿ ತಂದು ತಿಂದು ನೀರು ಕುಡಿದಿದ್ದರಿಂದ ಅತ್ಯವ್ಯಸ್ಥ ಆದವೆಂದು ಹೇಳಲಾಗಿದೆ. ಕೂಡಲೇ ಅವರನ್ನು ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲ ವಿದ್ಯಾರ್ಥಿಗಳು ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು ಓರ್ವ ವಿದ್ಯಾರ್ಥಿಯನ್ನು ನಗರದ ಕೆಎಲ್‍ಇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಮೂಡಲಗಿ ತಹಶೀಲದಾರ ಮುರಳೀಧರ ತಳ್ಳಿಕೇರಿ, ಉಪತಹಶೀಲದಾರ ಎಲ್.ಎಚ್. ಭೋವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ ಹಾಗೂ ಜಿ.ಬಿ.ಬಳಗಾರ ಅವರು ಧಾವಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
” ಸುಮಾರು ಎರಡು ವರ್ಷಗಳಿಂದ ಬಿಸಿಯೂಟ ವ್ಯವಸ್ಥೆ ಸರಿಯಾಗಿ ಇರುವದಿಲ್ಲ. ಈ ಬಗ್ಗೆ ಅನೇಕ ಬಾರಿ ಪಾಲಕರು ಬಂದು ಶಿಕ್ಷಕರಿಗೆ ದೂರಿದರೂ ಸಹ ಯಾವುದೇ ಪ್ರಯೋಜನವಾಗಿರುವದಿಲ್ಲ. ಅಲ್ಲದೆ ವಾರದಲ್ಲಿ 2-3ದಿನ ಬಿಸಿಯೂಟ ನೀಡುವದೇ ಇಲ್ಲ. ಅರೆಬೆಂದ ಅನ್ನ ಮತ್ತು ನೀರಿನಂತಿರುವ ಸಾರ ನೀಡಲಾಗುತ್ತಿದೆ. ಮಕ್ಕಳು ಕೇಳಿದರೆ ಅವರನ್ನು ಬೆದರಿಸಿ ಸುಮ್ಮಕೊಡ್ರಿಸಲಾಗುತ್ತಿತ್ತು”.
-ಓರ್ವ ಗ್ರಾಮಸ್ಥ
” ಸದ್ಯ ವಿದ್ಯಾರ್ಥಿಗಳು ಆರೋಗ್ಯದ ಗಮನಿಸಲಾಗುತ್ತಿದ್ದು ಅವರು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ ಬಳಿಕ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳಲಾಗುವದು ”
-ಅಜೀತ ಮನ್ನಿಕೇರಿ
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ