RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಬ್ಯಾಂಕ ಸಿಬ್ಬಂದಿಗಳ ಅಸಹಕಾರ : ಪರದಾಡುತ್ತಿರುವ ಗ್ರಾಹಕರು

ಘಟಪ್ರಭಾ:ಬ್ಯಾಂಕ ಸಿಬ್ಬಂದಿಗಳ ಅಸಹಕಾರ : ಪರದಾಡುತ್ತಿರುವ ಗ್ರಾಹಕರು 

19ಜಿಪಿಬಿ-1-1-2 ಘಟಪ್ರಭಾ: ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಪರದಾಡುತ್ತಿದ್ದರೆ, ಕೆಲಸ ವೇಳೆಯಲ್ಲಿ ಕುರ್ಚಿ ಮೇಲೆ ನಿದ್ರೆ ಮಾಡುತ್ತಿರುವ ಓರ್ವ ಸಿಬ್ಬಂದಿ.

ಬ್ಯಾಂಕ ಸಿಬ್ಬಂದಿಗಳ ಅಸಹಕಾರ : ಪರದಾಡುತ್ತಿರುವ ಗ್ರಾಹಕರು

 

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 19 :

 
ಸಿಂಡಿಕೇಟ್ ಬ್ಯಾಂಕ ಸಿಬ್ಬಂದಿಗಳು ಗ್ರಾಹಕರೊಂದಿಗೆ ಅಸಹಕಾರ ತೋರುತ್ತಿದ್ದಾರೆಂದು ಗ್ರಾಹಕರು ಆರೋಪಿಸಿದ್ದಾರೆ.
ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿರವ ಸಿಂಡಿಕೇಟ್ ಬ್ಯಾಂಕಿನ ಘಟಪ್ರಭಾ ಶಾಖೆಯ ಸಿಬ್ಬಂದಿಗಳು ಗ್ರಾಹಕರಿಗೆ ಸಹಕರಿಸದೇ ತೊಂದರೆ ಕೊಡುತ್ತಿದ್ದಾರೆ. ಸರಿಯಾಗಿ ಮಾಹಿತಿ ನೀಡದೆ ಬ್ಯಾಂಕಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.
ಐದು ತಿಂಗಳಿಂದ ಬ್ಯಾಂಕಿನ ಪಾಸ್ ಬುಕ್ ಪ್ರೀಂಟರ್ ಕೆಟ್ಟಿದ್ದು ಗ್ರಾಹಕರ ಪಾಸ್ ಬುಕ್ ಎಂಟ್ರಿ ಆಗುತ್ತಿಲ್ಲ. ಕೆಲವೊಂದು ಖಾತೆಗಳು ಲಾಕ್ ಆಗಿದ್ದು, ತಿಂಗಳ ಗಟ್ಟಲೆ ಅಲೆದಾಡಿದರೂ ಸರಿ ಪಡಿಸುತ್ತಿಲ್ಲ. ಪಾಸ್ ಬುಕ್ ಪ್ರಿಂಟ್ ಸಿಗದ ಗ್ರಾಹಕರು ಬ್ಯಾಂಕ ಸ್ಟೇಟ್ ಮೆಂಟ್ ಕೇಳಿದರೆ ಮೊದಲಿಗೆ ಉಚಿತ ಅಂತ ಹೇಳಿ ನಂತರ ಬ್ಯಾಂಕ ಖಾತೆಯಲ್ಲಿನ ಹಣ ಗ್ರಾಹಕರಿಗೆ ಗೊತ್ತಿಲ್ಲದೆ ಕಟ್ಟ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಕೆಲವೊಂದು ಶಾಲಾ ಮಕ್ಕಳ ಖಾತೆಗಳು ಲಾಕ್ ಆಗಿದ್ದು, ಶಾಲೆಗಳಲ್ಲಿ ಬ್ಯಾಂಕ ಪಾಸ್ ಬುಕ್ ಅಗತ್ಯವಿರುವ ಪಾಲಕರು ದಿನನಿತ್ಯ ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕಿನ ಅಸಹಕಾರನಿಂದ ಶಾಲಾ ಮಕ್ಕಳ ಸ್ಕಾಲರಶೀಪ್‍ಗಳು ಕೈ ತಪ್ಪುವ ಆತಂಕ ಪಾಲಕರನ್ನು ಕಾಡುತ್ತಿದೆ. ಈ ಸಿಂಡಿಕೇಟ ಬ್ಯಾಂಕ ಅತ್ಯಂತ ಹಳೆಯದಾಗಿದ್ದು, ಸಾಕಷ್ಟು ವಿವಿದ ಪಿಂಚಣಿದಾರರು ಇದ್ದು ಅವರೆಲ್ಲ ವಯೋವೃದ್ದರಾಗಿದ್ದು ಸಿಬ್ಬಂದಿಯ ಕೊರತೆಯಿಂದ ಹಣಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ.

ಸಿಂಡಿಕೇಟ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಸಿಬ್ಬಂದಿಗಳ ಜಾಗದಲ್ಲಿ ಕೆಲಸ ಮಾಡುತ್ತಿರುವ ಸೆಕ್ಯೂರಿಟಿ ಗಾರ್ಡ.

ಸಿಬ್ಬಂದಿ ಕೊರತೆ: ಘಟಪ್ರಭಾ ವ್ಯವಹಾರಿಕ ನಗರವಾಗಿರುವುದರಿಂದ ಘಟಪ್ರಭಾ, ಧುಪದಾಳ, ಬಡಿಗವಾಡ ಸೇರಿದಂತೆ 15 ಕ್ಕೂ ಹೆಚ್ಚು ಹಳ್ಳಿಗಳ ಜನರ ವ್ಯವಹಾರ ಈ ಬ್ಯಾಂಕಿನಲ್ಲಿದೆ ಆದರೆ ಗ್ರಾಹಕರ ಸಂಖ್ಯೆ ಅನುಗುಣವಾಗಿ ಸಿಬ್ಬಂದಿ ಇಲ್ಲ. ಇದರಿಂದ ದಿನನಿತ್ಯ ಬ್ಯಾಂಕಿನಲ್ಲಿ ಜನದಟ್ಟನೆ ಉಂಟಾಗುತ್ತಿದೆ. ಸಿಬ್ಬಂದಿ ಇಲ್ಲದ ಕಾರಣ ಸೆಕ್ಯೂರಿಟಿ ಕೆಲಸದಲ್ಲಿ ನಿಯೋಜಿಸಲಾದ ಗಾರ್ಡ ಸಿಬ್ಬಂದಿಗಳ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕಿನ ಈ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತ ಪಡಿಸಿರುವ ಗ್ರಾಹಕರು ಯಾವುದಾರೂ ಅಹಿತಕರ ಘಟನೆ ನಡೆದರೆ ಯಾರು ಜವಾಬ್ದಾರರು ಅಂತ ಪ್ರಶ್ನಿಸುತ್ತಿದ್ದಾರೆ.
ಆದ್ದರಿಂದ ಮೇಲಾಧಿಕಾರಿಗಳು ಘಟಪ್ರಭಾ ಸಿಂಡಿಕೇಟ್ ಬ್ಯಾಂಕಿನಲ್ಲಿ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಸರಿ ಪಡಿಸಬೇಕೆಂದು ಆಗ್ರಸಿದ್ದಾರೆ. ಇಲ್ಲವಾದಲ್ಲಿ ಬ್ಯಾಂಕಿನ ಅವ್ಯವಸ್ಥೆಯ ವಿರುದ್ಧ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಹಕರಾದ ಮಹ್ಮದಗೌಸ ನಾಶಿಪುಡಿ ಹಾಗೂ ಸವಿತಾ ಪಟ್ಟಣಶೆಟ್ಟಿ ಎಚ್ಚರಿಸಿದ್ದಾರೆ.

 

ಬ್ಯಾಂಕಿನಲ್ಲಿ ಪ್ರೀಂಟರ್ ಸಮಸ್ಯೆಯಿದ್ದ ಕಾರಣ ಗ್ರಾಹಕರಿ ಪಾಸ್ ಬುಕ್ ಪ್ರೀಂಟ್ ನೀಡಲು ಆಗುತ್ತಿಲ್ಲ. ಬ್ಯಾಂಕಿನಲ್ಲಿ ಸಿಬ್ಬಂದಿ ಇದ್ದರರೂ ಸಹ ವ್ಯವಹಾರ ಹೆಚ್ಚಿರುವುದರಿಂದ ಇನ್ನು ಇಬ್ಬರು ಸಿಬ್ಬಂದಿಗಳ ಅಗತ್ಯವಿದೆ ಎಲ್ಲ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ.
ವಿನಯ, ಬ್ಯಾಂಕಿನ ವಸೂಲಾತಿ ಸಿಬ್ಬಂದಿ

Related posts: