RNI NO. KARKAN/2006/27779|Sunday, December 22, 2024
You are here: Home » breaking news » ನಿಪ್ಪಾಣಿ:ಮೂಲಭೂತ ಸೌಕರ್ಯ ವಂಚಿತ ನಿಪ್ಪಾಣಿಯ ಸರಕಾರಿ ಆಸ್ಪತ್ರೆ

ನಿಪ್ಪಾಣಿ:ಮೂಲಭೂತ ಸೌಕರ್ಯ ವಂಚಿತ ನಿಪ್ಪಾಣಿಯ ಸರಕಾರಿ ಆಸ್ಪತ್ರೆ 

ಮೂಲಭೂತ ಸೌಕರ್ಯ ವಂಚಿತ ನಿಪ್ಪಾಣಿಯ
ಸರಕಾರಿ ಆಸ್ಪತ್ರೆ

ನಿಪ್ಪಾಣಿ ಜು 15 : ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ರೋಗಿಗಳಿಗೆ ,ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಬಡವರು ಆಗಮಿಸುತ್ತಾರೆ‌. ಆದರೆ ವೈದ್ಯರಿಲ್ಲದರಿಂದಾಗಿ ಬಡವರು ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕಾದ ಪ್ರಸಂಗ ಒದಗಿ ಬಂದಿದೆ. ಅಲ್ಲದೇ ಅಲ್ಲಿನ ಕೆಲ ವೈದ್ಯರು ಪ್ರತಿನಿತ್ಯ ಕತ೯ವ್ಯಕ್ಕೆ ಬರುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬಂದಿವೆ.

ಗಡಿಯಲ್ಲಿರುವ ನಿಪ್ಪಾಣಿ ಪಟ್ಟಣವನ್ನು ತಾಲೂಕನ್ನಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ ಆಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಕಯ೯ಗಳು ಮಾತ್ರ ಮರಿಚೀಕೆಯಾಗಿದೆ. ನಿಪ್ಪಾಣಿ ಪಟ್ಟಣದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗೆ ಕೆಲ ವೈದ್ಯರ ಕೊರತೆಯಿದೆ. ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ ಅವರಿಗೆ ತಿಳಿಸಿದರೆ, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಜರಗಿಸಲಾಗುವುದು ಎಂದು ಜಾರಿಕೊಂಡಿದ್ದಾರೆ ಎನ್ನಲಾಗಿದೆ.

Related posts: