ಗೋಕಾಕ:ದಿ.31 ರಂದು ದಿವಂಗತ ಮಹ್ಮದ ರಫೀ ಅವರ ಸವಿನೆನಪಿಗಾಗಿ “ರಫೀ ರಂಗ ರಿಯಾಜ ಕೆ ಸಂಗ್” ಸಂಗೀತ ಕಾರ್ಯಕ್ರಮ
ದಿ.31 ರಂದು ದಿವಂಗತ ಮಹ್ಮದ ರಫೀ ಅವರ ಸವಿನೆನಪಿಗಾಗಿ “ರಫೀ ರಂಗ ರಿಯಾಜ ಕೆ ಸಂಗ್” ಸಂಗೀತ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಜು 29 :
ಸ್ಥಳೀಯ ಮಾರ್ಡನ ಮೇಲೋಡಿಸ ಆಕೆರ್ಸ್ಟ್ರಾ ತಂಡ ದಿಂದ ಸತೀಶ ಜಾರಕಿಹೊಳಿ ಪೌಂಡೇಶನ್ ಸಹಯೋಗದಲ್ಲಿ ಭಾರತದ ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಮಹ್ಮದ ರಫೀ ಅವರ ಸವಿನೆನಪಿಗಾಗಿ ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ರಫೀ ರಂಗ ರಿಯಾಜ ಕೆ ಸಂಗ್ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯದರ್ಶಿ ರಿಯಾಜ ಚೌಗಲಾ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜುಲೈ 31 ರಂದು ಸಾಯಂಕಾಲ 6 ಘಂಟೆಗೆ ಜರುಗವ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಚಾಲಾನೆ ನೀಡುವರು . ಅತಿಥಿಗಳಾಗಿ ಶಾಸಕ ಅನಿಲ ಬೆನಕೆ, ಮಾಜಿ ಶಾಸಕ ಫೀರೋಜ ಸೇಠ್, ಸತೀಶ ಶುಗರ್ಸ ಎಂ.ಡಿ. ಸಿದ್ದಾರ್ಥ ವಾಡೆನ್ನವರ, ಯುವ ದುರೀಣ ರಾಜು ಸೇಠ್, ಉಪಸ್ಥಿತರಿರುವರು .
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸಿ ಸತ್ಕರಿಸಲಾಗುವದು. ಕಾರಣ ಎಲ್ಲಾ ಸಂಗೀತ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತರಬೇಕೆಂದು ರಿಯಾಜ ಚೌಗಲಾ ಕೋರಿದ್ದಾರೆ