ಮೂಡಲಗಿ:ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿರುವ ಪತ್ರಕರ್ತರನ್ನು ಗುರುತಿಸಿ ಸತ್ಕಾರ ಮಾಡುತ್ತಿರುವುದು ಶ್ಲಾಘನೀಯ
ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿರುವ ಪತ್ರಕರ್ತರನ್ನು ಗುರುತಿಸಿ ಸತ್ಕಾರ ಮಾಡುತ್ತಿರುವುದು ಶ್ಲಾಘನೀಯ
ನಮ್ಮ ಬೆಳಗಾವಿ ಸುದ್ದಿ , ಹಳ್ಳೂರ ಜು 30 :
ತಿದ್ದದೆ ತೀಡದೆ ಕಾಣದು ಅಂದ ಗೊಂಬೆ, ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ, ನಿಂದನೆಗೆ ನೋವಿಗೆ ಅಳುಕಿದರೆ ರೂಪಗೋಳ್ಳದು ಬದುಕು ಹಾಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿರುವ ಪತ್ರಕರ್ತರನ್ನು ಗುರುತಿಸಿ ಗ್ರಾಮೀಣ ಸೊಗಡಿನಲ್ಲಿ ಸತ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು
ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಬೆಳಗಾವಿ ಇವರ ಆಶ್ರಯದಲ್ಲಿ ಪ್ರತಿಕಾ ದಿನಾಚರಣೆ ಹಾಗೂ ಪತ್ರಕರ್ತರಿಗೆ ಸತ್ಕಾರ ಸಮಾರಂಭ ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಳ್ಳೂರ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯಾಗಿದ್ದಾರೆ. ಸ್ಥಳೀಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ಬಿತ್ತರಿಸಿ ಸಮಾಜ ಸುಧಾರಣೆಯ ಕಾರ್ಯ ನಿರ್ವಹಿಸುತ್ತಾರೆ. ರಾಜಕೀಯ ವ್ಯವಸ್ಥೆ, ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವುದರ ಜೊತೆಗೆ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತಮ್ಮ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ, ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ನ್ಯಾಯಂಗದ ನಾಲ್ಕನೇ ಅಂಗ ಎಂದು ಕರೆಯಲಾಗಿದೆ ಎಂದು ಹೇಳಿದರು.
ಗ್ರಂಥಪಾಲಕ ಹಾಗೂ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ಪತ್ರಕರ್ತರು ಯಾವುದೇ ಆಮೀಷಕ್ಕೆ ಒಳಗಾಗದೇ ಭ್ರಷ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಪ್ಪುಗಳನ್ನು ಕಂಡಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಿ ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಾರೆ, ಗ್ರಾಮದಲ್ಲಿ ಶೌಚಾಲಯಗಳು ಇದ್ದರು ಬಯಲು ಶೌಚಾಲಯವನ್ನೆ ಅವಲಂಭಿಸುತ್ತಿರುವುದು ವಿಷಾಧನೀಯ. ಅಧಿಕಾರಿಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುಧೀರ ನಾಯರ್ ಪ್ರಾಸ್ತವಿಕವಾಗಿ ಮಾತನಾಡಿ, ಯುವಕರು ಯುವಕ ಸಂಘಗಳನ್ನು ಪ್ರಾರಂಭಿಸಿ ಗ್ರಾಮದಲ್ಲಿ ಜಾನಪದ ಕಲೆ, ಕ್ರೀಡೆ, ಸ್ವಚ್ಛತೆ ಹಾಗೂ ಪರಿಸರ ಕಾಳಜಿಯಲ್ಲಿ ತೊಡಗಿಕೊಂಡು ದೇಶದ ಅಭಿವೃದ್ದಿಗೆ ಪಾತ್ರರಾಗಬೇಕು ಎಂದರು.
ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಗ್ರಾ. ಪಂ ಉಪಾಧ್ಯಕ್ಷ ಉಮೇಶ ಸಂತಿ ವಹಿಸಿದ್ದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಘಟಕ ಅಧ್ಯಕ್ಷ ಸಿದ್ದಣ್ಣ ದುರದುಂಡಿ ಗ್ರಾಮ ಘಟಕದ ಅಧ್ಯಕ್ಷ ಮಲ್ಲು ಬೋಳನ್ನವರ ಘಟಕಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಪೇಟ ತೊಡಿಸಿ ಸವಿನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ತಾ.ಪಂ ಸದಸ್ಯೆ ಸವಿತ ಡಬ್ಬನ್ನವರ, ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ, ಗ್ರಾಪಂ ಅಭಿವೃದ್ದಿ ಅಧಿಕಾರಿ ಎಚ್.ವಾಯ್ ತಾಳಿಕೋಟಿ, ಹನುಮಂತ ತೇರದಾಳ, ಬಸಪ್ಪ ಹಡಪದ, ಶ್ರೀಶೈಲ್ ಬಾಗೋಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಬೋಳನ್ನವರ, ಮಹಾದೇವ ಹೊಸಟ್ಟಿ, ಬಿ.ಎಸ್ ನಂದೆಪ್ಪನ್ನವರ, ವಿಠ್ಠಲ ದುರದುಂಡಿ ಪತ್ರಕರ್ತರಾದ ಯ.ಯ. ಸುಲ್ತಾನಪೂರ, ಮಹಾದೇವ ನಡುವಿನಕೇರಿ, ಎಲ್.ವಾಯ್ ಅಡಿಹುಡಿ, ಸುಧಕರ ಉಂದ್ರಿ, ಸುಭಾಸ ಗೊಡ್ಯಾಗೋಳ, ಅಲ್ತಾಫ ಹವಾಲ್ದರ, ಭಗವಂತ ಉಪ್ಪಾರ, ಶಂಕರ ಹಾದಿಮನಿ, ವೆಂಕಟೇಶ ಮರಾಠೆ, ಕೆ.ಎಲ್.ಮೀಶಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೋಮಶೇಖರ ಕಡ್ಡಿ ನಿರೂಪಿಸಿದರು. ಹನುಮಂತ ಹಡಪದ ಸ್ವಾಗತಿಸಿ, ವಂದಿಸಿದರು.