ಬೆಟಗೇರಿ:ಗ್ರಾಮದಲ್ಲಿ ಅಪರಾದ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್‍ರೊಂದಿಗೆ ಸ್ಥಳೀಯರು ಸಹಕಾರ ನೀಡಬೇಕು
ಗ್ರಾಮದಲ್ಲಿ ಅಪರಾದ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್‍ರೊಂದಿಗೆ ಸ್ಥಳೀಯರು ಸಹಕಾರ ನೀಡಬೇಕು
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಜು 30 :
ಗ್ರಾಮದಲ್ಲಿ ಅಪರಾದ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್‍ರೊಂದಿಗೆ ಸ್ಥಳೀಯರು ಸಹಕಾರ ನೀಡಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಬೆಟಗೇರಿ ಗ್ರಾಮದ ಬೀಟ್ ಪೇದೆ ವಿ.ಆರ್.ಗಲಬಿ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಹಾಗೂ ಪಿಎಸ್‍ಐ ಎಚ್.ಕೆ.ನರಳೆ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ಜುಲೈ.30 ರಂದು ನಡೆದ ಬೀಟ್ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯರು ಶಾಂತಿ, ಸೌಹಾರ್ದತೆಯಿಂದ ಇರಬೇಕು. ಮುಂಬರುವ ಗಣೇಶ ಹಬ್ಬವನ್ನು ಅಹಿತಕರ ಘಟನೆ ನಡೆಯದಂತೆ ಶಾಂತತೆಯಿಂದ ಆಚರಿಸಬೇಕು. ಇಲ್ಲಿಯ ಯುವಕರು, ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು, ಅಪರಾಧ ಕೃತ್ಯ ಎಸಗಿದವರ ಮೇಲೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವದು. ಅಪರಾದ ಮುಕ್ತ ಸಮಾಜ ನಿರ್ಮಾಣಕ್ಕೆ ಗ್ರಾಮಸ್ಥರÀ ಸಹಕಾರದ ಕುರಿತು ಬೆಟಗೇರಿ ಗ್ರಾಮದ ಬೀಟ್ ಪೇದೆ ವಿ.ಆರ್.ಗಲಬಿ ತಿಳಿಸಿದರು.
ರಮೇಶ ನಾಯ್ಕ, ಸಂಜು ಪೊಜೇರಿ, ಉದ್ದಪ್ಪ ಮಾಕಾಳಿ, ಬಸಪ್ಪ ಚಿಕ್ಕೂಡಿ, ಕೆಂಪಣ್ಣ ಪೇದಣ್ಣವರ, ವಿಠಲ ಚಂದರಗಿ ಸೇರಿದಂತೆ ಸ್ಥಳೀಯ ಬೀಟ್ ಸದಸ್ಯರು, ಸ್ಥಳೀಯರು ಇದ್ದರು.