RNI NO. KARKAN/2006/27779|Saturday, December 28, 2024
You are here: Home » breaking news » ಬೆಳಗಾವಿ:ಮಹಮ್ಮದ್ ರಫಿ ಅವರು ಇಡೀ ವಿಶ್ವವೇ ಪ್ರೀತಿಸುವ‌ ಮಹಾನ್ ಗಾಯಕ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ:ಮಹಮ್ಮದ್ ರಫಿ ಅವರು ಇಡೀ ವಿಶ್ವವೇ ಪ್ರೀತಿಸುವ‌ ಮಹಾನ್ ಗಾಯಕ : ಮಾಜಿ ಸಚಿವ ಸತೀಶ ಜಾರಕಿಹೊಳಿ 

ಮಹಮ್ಮದ್ ರಫಿ ಅವರು ಇಡೀ ವಿಶ್ವವೇ ಪ್ರೀತಿಸುವ‌ ಮಹಾನ್ ಗಾಯಕ : ಮಾಜಿ ಸಚಿವ ಸತೀಶ ಜಾರಕಿಹೊಳಿ

 

 
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 1 :

 

 

ಮಹಮ್ಮದ್ ರಫಿ ಅವರು ಇಡೀ ವಿಶ್ವವೇ ಪ್ರೀತಿಸುವ‌ ಮಹಾನ್ ಗಾಯಕ ಎಂದು ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರದಂದು ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಭಾರತದ ಖ್ಯಾತ ಹಿನ್ನಲೆ ಗಾಯಕ ದಿವಂಗತ ಮಹ್ಮದ ರಫೀ ಅವರ ಸವಿನೆನಪಿಗಾಗಿ ಹಮ್ಮಿಕೊಳ್ಳಲಾಗಿದ್ದ “ರಫಿ ಕೆ ರಂಗ ರಿಯಾಜ್ ಕೆ ಸಂಗ” ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶ ಕಂಡ ಮಹಾನ ಗಾಯಕ ರಫೀ ಅವರಂತಹ ಪ್ರತಿಭೆಗಳು ಎಲ್ಲ ರಂಗದಲ್ಲಿಯೂ ಹುಟ್ಟಿ ಬರಬೇಕು. ಮಹ್ಮದ ರಫಿ ಅವರು ಹಾಡಿದ ಹಾಡುಗಳನ್ನು ನಾಡಿನ ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ನಮ್ಮ ಫೌಂಡೇಶನ ವತಿಯಿಂದ ಕಳೆದ ನಾಲ್ಕು ವರ್ಷದಿಂದ ಕಾರ್ಯಕ್ರಮ ಮಾಡುತ್ತಿದ್ದೇವೆ. ಎಲ್ಲರ ಹೃದಯದಲ್ಲಿ ಮಹಮ್ಮದ್ ರಫಿ ಶಾಶ್ವತವಾಗಿ ನೆಲಸಲಿ ಎಂಬುವುದೇ ಕಾರ್ಯಕ್ರಮದ ಉದ್ದೇಶ ಎಂದರು.

ಗಾಯಕ ರಿಯಾಜ್ ಚೌಗಲಾ‌ ಮತ್ತಷ್ಟು ಬೆಳೆಯಲಿ: 

ರಿಯಾಜ್ ಚೌಗಲಾ ಜಿಲ್ಲೆಯ ಜ್ಯೂ. ಮಹಮ್ಮದ್ ರಫಿ ಎಂದೇ ಚಿರಪರಿಚಿತರಾಗಿದ್ದಾರೆ.‌ ಬಾಲ್ಯದಿಂದಲೇ 
ಹವ್ಯಾಸ ಕಲಾವಿದರು. ತಮ್ಮದೇ ಆದ ಶೈಲಿಯಲ್ಲಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಮಹಮ್ಮದ್ ರಫಿ ಅವರಿಗೆ ಹೆಚ್ಚು ಪ್ರಭಾವಿತರಾಗಿ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಅವರ ಕಲೆಯನ್ನು ಮೆಚ್ಚಿ ಅವರ ಹಿತೈಸಿಗಳು, ಸಾರ್ವಜನಿಕರು ಈ ಮಟ್ಟಕ್ಕೆ ಅವರನ್ನು ಬೆಳಸಿದ್ದಾರೆ. ಕಲೆ‌ಯನ್ನು ಬೆಳಸಿ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ನಿರಂತರ ಶ್ರಮಿಸುತ್ತಿದೆ ಎಂದರು. 

ಇದೇ ಸಂದರ್ಭದಲ್ಲಿ ಔದ್ಯೋಗಿಕ , ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸತೀಶ ಶುಗರ್ಸ್ ವ್ಯವಸ್ಥಾಪಕ‌ ನಿರ್ದೇಶಕ ಸಿದ್ದಾರ್ಥ ವಾಡೇನ್ನವರ್, ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋಕಾಕ‌ನ ಅಮ್ಮಾಜಿ ನೃತ್ಯ ಶಾಲೆಯ ರಜನಿ ಜೀರಗ್ಯಾಳ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂತೋಷ ಗುರುವ ಅವರನ್ನು ಸತ್ಕರಿಸಿ,ಗೌರವಿಸಲಾಯಿತು. ಕಾರ್ಯಕ್ರಮದ ಪ್ರಯೋಜಕ್ವ ವಹಿಸಿದ ಸುಭಾಷ್ ಹೊನಮನಿ ಅವರನ್ನು ಸನ್ಮಾನಿಸಲಾಯಿತು‌. ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಮತ್ತು ಸಿರಿಗನ್ನಡ ಮಹಿಳಾ ವೇದಿಕೆ ವತಿಯಿಂದ ಗಾಯಕ ರಿಯಾಜ್ ಚೌಗಲಾ ಅವರನ್ನು ಸತ್ಕರಿಸಿ,ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ದಿವಂಗತ ಮಹಮ್ಮದ ರಫಿ ಅವರು ಹಾಡಿದ ಸೂಮಾರು 30 ಕ್ಕೂ ಹೆಚ್ಚು ಹಾಡುಗಳನ್ನು ಗಾಯಕ ರಿಯಾಜ್ ಚೌಗಲಾ ಅವರ ತಂಡದಿಂದ ಹಾಡಿ ರಂಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ಜಿಪಂ ಸದಸ್ಯ ಸಿದ್ದು ಸುಣಗಾರ, ಪಾಲಿಕೆ ಸದಸ್ಯೆ ಸರಳಾ ಹಿರೇಕರ್, ಗೋಕಾಕ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾವಂಶಿ,ಸುಭಾಸ ಹುಲಮನಿ, ಸತೀಶ‌ ಬೆನ್ನಿ, ಯುವರಾಜ್ ತಳವಾರ, ಪ್ರಶಾಂತ ಪೂಜಾರಿ, ಪ್ರಕಾಶ ಬೊಮ್ಮನವರ್ ಮುಂತಾದವರು ಇದ್ದರು. ಮಹಮ್ಮದ್ ಫಯಾಜ್ ಸ್ವಾಗತಿಸಿ, ನಿರೂಪಿಸಿದರು.

Related posts: