ಗೋಕಾಕ:ಕೆ.ಸಿ.ಎಸ್.ಆರ್ ನಿಯಮ ಗಾಳಿಗೆ ತೂರಿ ಸಹಾಯಕ ಆಡಳಿತಾಧಿಕಾರಿಯ ನೇಮಕ : ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅವಾಂತರ
ಕೆ.ಸಿ.ಎಸ್.ಆರ್ ನಿಯಮ ಗಾಳಿಗೆ ತೂರಿ ಸಹಾಯಕ ಆಡಳಿತಾಧಿಕಾರಿಯ ನೇಮಕ : ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅವಾಂತರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 2 :
ವಿಶೇಷ ವರದಿ :
ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಿಂದೆ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಎಂ.ಸಿ.ಪಾಟೀಲ ಕಳೆದ ಒಂದು ತಿಂಗಳಿನಿಂದ ಕೆ.ಸಿ.ಎಸ್.ಆರ್ ನಿಯಮ ಮೀರಿ ಸಹಾಯಕ ಆಡಳಿತಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ .
ಕೆ.ಸಿ.ಎಸ್. ಆರ್ (ಕರ್ನಾಟಕ ಸೇವಾ ನಿಯಮಾವಳಿ) ನಿಯಮ ಮೀರಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ ಇಂದ್ರೇಶ ಮತ್ತು ಆಡಳಿತ ಅಧಿಕಾರಿ ಎಸ್.ಐ.ಅಥಣಿ ಅವರು ಆದೇಶ ಹೊರಡಿಸಿದ್ದಾರೆ . ಇದಕ್ಕೆ ಸಾಥ್ ನೀಡಿರುವ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ನಾಗೇಶ ನಾಯಿಕ ಅವರು ಎಂ.ಸಿ ಪಾಟೀಲ ಅವರನ್ನು jion ಮಾಡಿಕೊಂಡಿಕೊಂಡು ಇಲಾಖೆಯ ನಿಯಮವನ್ನು ಗಾಳಿಗೆ ತೂರಿದ್ದಾರೆ .
ಕಳೆದ ಹಲವಾರು ವರ್ಷಗಳಿಂದ ಅರಭಾವಿಯಲ್ಲಿ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಎಂ.ಸಿ.ಪಾಟೀಲ ಈ ಮಹಾವಿದ್ಯಾಲಯದಲ್ಲಿ ಹಲವಾರು ಡೀನಗಳನ್ನು ಕಂಡು ಇಲ್ಲಿಯೆ ಆಳವಾದ ಬೇರುಗಳನ್ನು ಬಿಟ್ಟಿದ್ದಾನೆ.ಇದರ ಪರಿಣಾಮ ಈ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಯಾರೇ ಡೀನ್ ಬರಲಿ ಇತನು ಹೇಳಿದ ಹಾಗೆ ಕಾರ್ಯನಿರ್ವಹಿಸುವಷ್ಠರ ಮಟ್ಟಿಗೆ ತನ್ನ ಪ್ರಭಾವವನ್ನು ಈ ಮಹಾವಿದ್ಯಾಲಯದಲ್ಲಿ ಬೀರಿದ್ದಾನೆ .ಇಲ್ಲಿಗೆ ಬಂದ ಡೀನಗಳನ್ನು ತನ್ನ ವಶಕ್ಕೆ ಮಾಡಿಕೊಂಡು ತಾನು ಏನು ಸಾಧಿಸಬೇಕು ಅದನ್ನು ಸಾಧಿಸುವ ಅಡ್ಡದಾರಿ ಇತನು ಚನ್ನಾಗಿ ಬಲ್ಲಿದ್ದಾನೆ. ಇದರ ಪರಿಣಾಮ ಇಂದು ಈ ವ್ಯಕ್ತಿ ವಿಶ್ವವಿದ್ಯಾಲಯದ ಕೆ.ಸಿ.ಎಸ್.ಆರ್ ನಿಯಮ ಮೀರಿ ಇದೇ ಮಹಾವಿದ್ಯಾಲಯದಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾನೆ ಎಂಬುವದು ಈಗ ಚರ್ಚೆಗೆ ಗ್ರಾಸವಾಗಿದೆ.
ತೋಟಗಾರಿಕೆ ವಿಶ್ವವಿದ್ಯಾಲಯದ ಕೆ.ಸಿ.ಎಸ್.ಆರ್ ನಿಯಮದ ಪ್ರಕಾರ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಅದೆ ವಿಭಾಗದಲ್ಲಿ ಕಾರ್ಯನಿರ್ವಹಿಸಬೇಕು. ಬಡ್ತಿ ಹೊಂದಿದ್ದರು ಸಹ ಅದೇ ವಿಭಾಗದಲ್ಲಿ ಬಡ್ತಿ ಹೊಂದಬೇಕು .ಹಣಕಾಸು ವಿಭಾಗದವರು ಹಣಕಾಸು ವಿಭಾಗದಲ್ಲಿಯೆ ಕಾರ್ಯನಿರ್ವಹಿಸಬೇಕು ಮತ್ತು ಇದೆ ವಿಭಾಗದಲ್ಲಿ ಬಡ್ತಿ ಹೊಂದಬೇಕು ಹಾಗೂ ನಿಯುಕ್ತಿಯಾಗಬೇಕು ಇದು ಸರಕಾರ ಮಾಡಿದ ನಿಯಮ ಈ ಎರೆಡು ಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪ್ರಭಾರಿಯಾಗಲಿ , ತಮ್ಮ ವಿಭಾಗಗಳನ್ನು ಅದಲು ಬದಲು ಮಾಡಿಕೊಳ್ಳಲು ಕೆಸಿಎಸಆರ್ ನಿಯಮ ಅನುಮತಿ ನೀಡುವದಿಲ್ಲ. ಆದರೆ ಈ ಮಹಾಶಯ ನಿಯಮಗಳನ್ನು ಗಾಳಿಗೆ ತೂರಿ ತನ್ನ ಉನ್ನತ ಅಧಿಕಾರಿಗಳ ಮುಖಾಂತರ ಈ ಹುದ್ದೆಯನ್ನು ಅಲಂಕರಿಸಿದ್ದಾನೆ. ಇದು ಇತರ ಸಿಬ್ಬಂದಿಗಳಿಗೆ ಇರುಸು ಮುರುಸು ಉಂಟುಮಾಡುತ್ತಿದೆ.
ಕಳೆದ ಹಲವು ವರ್ಷಗಳಿಂದ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಇತನನ್ನು ಒಂದು ತಿಂಗಳ ಹಿಂದೆ ಬೀದರನ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ವರ್ಗಾವಣೆ ಮಾಡಿ ವಿಶ್ವವಿದ್ಯಾಲಯ ಆದೇಶಿಸಿತ್ತು ಆದರೆ ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಬೇಕಾದ ಎಂ.ಸಿ ಪಾಟೀಲ ಸಾಹೇಬರು ಅಡ್ಡದಾರಿ ಹಿಡಿದು ಕುಲಪತಿ ಮಟ್ಟದಲ್ಲಿ ಭಾರಿ ಗೋಲಮಾಲ ಮಾಡಿ ಕೆ.ಸಿ.ಎಸ್.ಆರ್ ನಿಯಮದ ವಿರುದ್ಧ ತನ್ನ ವರ್ಗಾವಣೆಯನ್ನು ತಡೆ ಹಿಡಿಸಿ ಕೇವಲ 15 ದಿನಗಳಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ ಇಂದ್ರೇಶ ಅವರಿಂದ ಅರಭಾವಿಯ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಆದೇಶ ಮಾಡಿಕೊಂಡು ಬಂದು ಕಳೆದ ಒಂದು ತಿಂಗಳಿನಿಂದ ಈ ಮಹಾವಿದ್ಯಾಲಯದಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ತನ್ನ ವಾಸುಸ್ಥಳವಾದ ಹಾವೇರಿ ಅಥವಾ ಅದಕ್ಕೆ ಸಮೀಪದಲ್ಲಿರುವ ಶಿರಸಿ ತೋಟಗಾರಿಕೆ ಮಹಾವಿದ್ಯಾಲಯಗಳಿಗೆ ಮತ್ತೆ ತನ್ನ ಮೂಲಸ್ಥಾನ ಹಣಕಾಸು ನಿಯಂತ್ರಣಾಧಿಕಾರಿಯಾಗಿ ವರ್ಗಾವಣೆ ಮಾಡಿಸಿಕೋಳ್ಳುವ ಸಲುವಾಗಿ ದೂರದ ಬೀದರಗೆ ಆದ ವರ್ಗಾವಣೆಯನ್ನು ಕೆಲ ತಿಂಗಳವರೆಗೆ ತಡೆಹಿಡಿದು ಇಲ್ಲಿಯೇ ಇರಬೇಕು ಎಂಬ ದುರುದ್ದೇಶದಿಂದ ಈ ನಿಯಮ ಬಾಹಿರ ಆದೇಶವನ್ನು ಮಾಡಿಕೊಂಡು ಬಂದಿದ್ದಾನೆ ಎಂಬ ಗೂಮಾನಿಗಳು ಈ ಮಹಾವಿದ್ಯಾಲಯದ ಆವರಣದಲ್ಲಿ ಕೇಳಿ ಬರುತ್ತಿವೆ.
ಇವನು ಹಣಕಾಸು ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂಧರ್ಭದಲ್ಲಿ ರಿವ್ಯಾಲಿಂಗ ಬಜೆಟ್ , ಕಛೇರಿ ನಿರ್ವಹಣೆ , ವಾಹನ ನಿರ್ವಹಣೆ , ಸೇರಿದಂತೆ ಇನ್ನುಳಿದ ಕೆಲಸ, ಕಾರ್ಯಗಳಿಗೆ ಬರುವ ಬಜೆಟ್ ಹಣವನ್ನು ಇತನು ಮಹಾವಿದ್ಯಾಲಯಕ್ಕೆ ಏನಾದರೂ ವಸ್ತುಗಳನ್ನು ಖರೀದಿಸುವ ಮತ್ತು ರಿಪೇರಿ ಮಾಡಿಸುವ ಸಂದರ್ಭದಲ್ಲಿ ಹಲವಾರು ಅವ್ಯವಹಾರಗಳನ್ನು ನಡೆಯಿಸಿ ಇಲ್ಲಿಗೆ ಬಂದ ಡೀನಗಳನ್ನು ತಮ್ಮ ವಶಕ್ಕೆ ಪಡೆದು ಈ ಎಲ್ಲ ವ್ಯವಹಾರಗಳನ್ನು ಮಾಡುತ್ತಿದ್ದಾನೆ ಎಂಬ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ .ಇದನ್ನೆಲ್ಲ ಮುಚ್ಚಿ ಹಾಕಲು ಇತನು ತಮ್ಮ ಪ್ರಭಾವ ಬೀರಿ ಕೆಲ ತಿಂಗಳಗಳಕಾಲ ಇಲ್ಲಿಯೆ ಸಹಾಯಕ ಆಡಳಿತಾಧಿಕಾರಿಯಾಗಿ ಆದೇಶ ಮಾಡಿಸಿ ಕೊಂಡು ಬಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ ಇಂದ್ರೇಶ ಅವರು ನಿವೃತ್ತಿ ಅಂಚಿನಲ್ಲಿರುವ ಸಂಧರ್ಭದಲ್ಲಿ ಈ ನಿಯಮ ಬಾಹೀರ ಆದೇಶ ಮಾಡಿ ಎಂ.ಸಿ ಪಾಟೀಲ ಗೆ ಸಹಕಾರ ನೀಡಿದ್ದು ಹಲವಾರು ಅನುಮಾನಗಳಿಗೆ ಪುಷ್ಠಿ ನೀಡುತ್ತಿದ್ದೆ .
ಈಗಲಾದರೂ ಸಬಂಧಪಟ್ಟ ಅಧಿಕಾರಿಗಳು ಈ ಅವಾಂತರವನ್ನು ಸರಿಪಡಿಸಿ ಅರಭಾವಿ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಸರಿಪಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ .