RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಬದುಕಿನ ಸಾಧನೆಯನ್ನು ಕಾಣಲು ಕಲೆಯು ಪೂರಕವಾಗಿದೆ : ಶಂಕರ ಮುಂಗರವಾಡಿ

ಗೋಕಾಕ:ಬದುಕಿನ ಸಾಧನೆಯನ್ನು ಕಾಣಲು ಕಲೆಯು ಪೂರಕವಾಗಿದೆ : ಶಂಕರ ಮುಂಗರವಾಡಿ 

ಬದುಕಿನ ಸಾಧನೆಯನ್ನು ಕಾಣಲು ಕಲೆಯು ಪೂರಕವಾಗಿದೆ : ಶಂಕರ ಮುಂಗರವಾಡಿ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 3 :

 

 
ಬದುಕಿನ ಸಾಧನೆಯನ್ನು ಕಾಣಲು ಕಲೆಯು ಪೂರಕವಾಗಿದೆ, ಭವಿಷ್ಯದ ನಿರ್ಮಾಣಕ್ಕೆ ವಿಧ್ಯಾರ್ಥಿ ಜೀವನವೇ ಮೈಲುಗಲ್ಲು. ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ ಶಂಕರ ಮುಂಗರವಾಡಿ ಹೇಳಿದರು
ಅವರು ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ವರ್ಣ ಆರ್ಟ ಗ್ಯಾಲರಿಯಲ್ಲಿ ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾವಿದ ಎಂ ಆರ್ ಹೊಸಕೋಟಿ ಭಾವಚಿತ್ರ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಎನ್ ಎಸ್ ಎಫ್ ಶಾಲೆಯ ಚತ್ರಕಲಾ ಶಿಕ್ಷಕ ಎಸ್ ಆರ್ ಗಾಯಕವಾಡ ಚಿಕ್ಕ ಮಕ್ಕಳ ಚಿತ್ರಕಲೆ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರ ಇವರು ಹಮ್ಮಿಕೊಂಡಿದ್ದ ಇನ್ಸಟಲೇಶನ ಪೇಂಟಿಂಗ್ ಕ್ಯಾಂಪನಲ್ಲಿ ಆಯ್ಕೆಯಾದ ಶೀಲಾ ಡೊಂಬಳೆ ಇವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಜಯಾನಂದ ಮಾದರ ಪ್ರಾಸ್ತಾವಿಕ ನುಡಿಯಾಡಿದರು, ಅದ್ಯಾಪಕಿ ಮಾಲಾ ದಳವಾಯಿ ಕಲಾಸಾಮಗ್ರಿ ವಿತರಿಸಿದರು. ಪ್ರವೀಣ ಯಡ್ರಾಂವಿ ಪ್ರಾರ್ಥಿಸಿದರು, ನೇತ್ರಾವತಿ ಬೆಳಗಲಿ ಸ್ವಾಗತಿಸಿದರು, ಮಂಜು ಮಡಿವಾಳ ನಿರೂಪಿಸಿದರು. ಸವಿತಾ ಪಡಿಮನಿ ವಂದಿಸಿದರು.

Related posts: