ಗೋಕಾಕ:ಮನೆ-ಮನೆಯಲ್ಲಿ ಬಸವ ಪಂಚಮಿ ಆಚರಿಸಬೇಕು : ಸಿದ್ದಾರ್ಥ ವಾಡೆನ್ನವರ
ಮನೆ-ಮನೆಯಲ್ಲಿ ಬಸವ ಪಂಚಮಿ ಆಚರಿಸಬೇಕು : ಸಿದ್ದಾರ್ಥ ವಾಡೆನ್ನವರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 5 :
ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಪ್ರತಿಯೊಬ್ಬರು ತಮ್ಮ- ತಮ್ಮ ಮನೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ಸತೀಶ ಶುಗರ್ಸ ಸಕ್ಕರೆ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಹೇಳಿದರು .
ನಾಗರ ಪಂಚಮಿ ನಿಮಿತ್ಯವಾಗಿ ಸೋಮವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬಡ ರೋಗಿಗಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಪ್ರತಿ ವರ್ಷ ಜರುಗುವ ನಾಗರಪಂಚಮಿ ಹಬ್ಬದ ಪ್ರಯುಕ್ತ ಹುತ್ತಕ್ಕೆ ಹಾಲು ಸುರಿಸಿ ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ ಅದನ್ನು ಹೋಗಲಾಡಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಮೌಢ್ಯದಿಂದ ಹೊರತರಲು ಮಾನವ ಬಂಧುತ್ವ ವೇದಿಕೆ ರಾಜಾದ್ಯಂತ ಶ್ರಮಿಸುತ್ತಿದೆ.
ರಾಜ್ಯದಲ್ಲಿ ಪ್ರತಿವರ್ಷ ಅಪೌಷ್ಠಿಕತೆಯಿಂದ 40 ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ನಾಗರಪಂಚಮಿ ಹಬ್ಬದ ಪ್ರಯುಕ್ತ ಹುತ್ತಕ್ಕೆ ಹಾಲು ಸುರಿಸಿ ಹಾಲನ್ನು ವ್ಯರ್ಥಮಾಡುವ ಬದಲು ಬಡ ಮಕ್ಕಳಿಗೆ, ಅನಾಥ ಆಶ್ರಮಗಳಿಗೆ ಮತ್ತು ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವುದರ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಲು ಪ್ರತಿಯೋಬ್ಬರು ಮುಂದಾಗಬೇಕು ಎಂದು ಸಿದ್ದಾರ್ಥ ವಾಡೆನ್ನವರ ಮನವಿ ಮಾಡಿದರು .
ಈ ಸಂದರ್ಭದಲ್ಲಿ ಡಾ. ಆರ್.ಎಸ್.ಬೆನ್ನಚಿನಮರಡಿ, ಡಾ. ರಮೇಶ ಪಟ್ಟಗುಂಡಿ, ಚಂದ್ರಶೇಖರ ಕೊಣ್ಣೂರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾಂವಶಿ, ರಿಯಾಜ ಚೌಗಲಾ, ಅಶೋಕ ಲಗಮಪ್ಪಗೋಳ, ಮಾನವ ಬಂಧುತ್ವ ವೇದಿಕೆಯ ರಮೇಶ ಕೋಲಕಾರ,ಶೆಟ್ಟೆಪ್ಪಾ ಹರಿಜನ,ಸುನಿಲ್ ಮೇತ್ರಿ,ಮಂಜು ಕಳ್ಳಿಮನಿ, ರಮೇಶ ಸಣ್ಣಕ್ಕಿ , ವಿಲ್ಸನ್ ಕಾನಟ್ಟಿ,ದುಂಡಪ್ಪ ಢವಳೇಶ್ವರ,ಕೇಶವ ಮೂಡಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು