RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನದಿ ಪಾತ್ರದ ಜನತೆ ಜಾಗೃತೆಯನ್ನು ವಹಿಸಿ ಸುರಕ್ಷಿತ ಸ್ಥಳಗಳತ್ತ ತೆರಳಬೇಕು : ಮಾಜಿ ಸಚಿವ ಸತೀಶ ಮನವಿ

ಗೋಕಾಕ:ನದಿ ಪಾತ್ರದ ಜನತೆ ಜಾಗೃತೆಯನ್ನು ವಹಿಸಿ ಸುರಕ್ಷಿತ ಸ್ಥಳಗಳತ್ತ ತೆರಳಬೇಕು : ಮಾಜಿ ಸಚಿವ ಸತೀಶ ಮನವಿ 

ನದಿ ಪಾತ್ರದ ಜನತೆ ಜಾಗೃತೆಯನ್ನು ವಹಿಸಿ ಸುರಕ್ಷಿತ ಸ್ಥಳಗಳತ್ತ ತೆರಳಬೇಕು : ಮಾಜಿ ಸಚಿವ ಸತೀಶ ಮನವಿ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 5 :

 

 

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ನಗರದ ಹೊರ ವಲಯದಲ್ಲಿರುವ ಮಾರ್ಕಂಡೇ ನದಿ ಮೇಲಿನ ಸೇತುವೆ ಹಾಗೂ ಘಟಪ್ರಭಾ ನದಿ ಮೇಲಿನ ಲೋಳಸೂರ ಸೇತುವೆ ಹಾಗೂ ಅಂಕಲಗಿ ಹತ್ತಿರದ ಬಳ್ಳಾರಿ ಹಳ್ಳದ ಸೇತುವೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ಮಾರ್ಕಂಡೇಯ-ಘಟಪ್ರಭಾ-ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹ ಭೀತಿಯುಂಟಾಗಿದೆ. ಇನ್ನೂ ಹೆಚ್ಚಿನ ನೀರನ್ನು ಹಿಡಕಲ್, ರಕ್ಕಸಕೊಪ್ಪ ಹಾಗೂ ಧುಪದಾಳ ಜಲಾಶಯದಿಂದ ನೀರನ್ನು ಬಿಡುತ್ತಿರುವ ಹಿನ್ನಲೆಯಲ್ಲಿ ನದಿ ಪಾತ್ರದ ಜನತೆ ಜಾಗೃತೆಯನ್ನು ವಹಿಸಿ ಸುರಕ್ಷಿತ ಸ್ಥಳಗಳತ್ತ ತೆರಳಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಶಿವು ಪಾಟೀಲ, ಪ್ರಕಾಶ ಬಾಗೇವಾಡಿ, ಆರೀಫ ಪೀರಜಾದೆ, ರಿಯಾಜ ಚೌಗಲಾ, ಮಹಾಲಿಂಗ ಸಾಯನ್ನವರ, ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ, ದ್ಯಾಮಣ್ಣ ಪೂಜೇರಿ, ಪ್ರಕಾಶ ಬಡಿಗೇರ ಸೇರಿದಂತೆ ಅನೇಕರು ಇದ್ದರು.

Related posts: