RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರವಾಹ ಭೀತಿ ಹಿನ್ನೆಲೆ : ನದಿ ತೀರದ ಗ್ರಾಮಗಳಿಗೆ ಎನ್‍ಎಸ್‍ಎಫ್ ಟೀಮ್ ಭೇಟಿ

ಗೋಕಾಕ:ಪ್ರವಾಹ ಭೀತಿ ಹಿನ್ನೆಲೆ : ನದಿ ತೀರದ ಗ್ರಾಮಗಳಿಗೆ ಎನ್‍ಎಸ್‍ಎಫ್ ಟೀಮ್ ಭೇಟಿ 

ಪ್ರವಾಹ ಭೀತಿ ಹಿನ್ನೆಲೆ : ನದಿ ತೀರದ ಗ್ರಾಮಗಳಿಗೆ ಎನ್‍ಎಸ್‍ಎಫ್ ಟೀಮ್ ಭೇಟಿ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 5 :

 

 
ದಿನೇ ದಿನೇ ಹೆಚ್ಚುತ್ತಿರುವ ಮಳೆಯಿಂದಾಗಿ ಹಿಡಕಲ್ ಜಲಾಶಯ ಭರ್ತಿ ಹಂತಕ್ಕೆ ತಲುಪಿರುವುದರಿಂದ ಘಟಪ್ರಭಾ ನದಿ ತೀರದ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗಾಗಿ ಸೋಮವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮುಖಂಡರುಗಳು ಗ್ರಾಮಗಳಿಗೆ ಭೇಟಿ ನೀಡಿದರು.
ಧಾರವಾಡ ಕವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಯುವ ಧುರೀಣ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಸಿಡಿಪಿಓ ವಾಯ್.ಎಂ. ಗುಜನಟ್ಟಿ, ಹೆಸ್ಕಾಂ ಎಇಇ ನಾಗನ್ನವರ, ಎಸ್.ಪಿ. ವರಾಳೆ, ಜಿಪಂ ಎಇಇ ಐ.ಎಂ. ದಫೆದಾರ, ಶಿವು ಪಾಟೀಲ, ನಿಂಗಪ್ಪ ಕುರಬೇಟ, ದಾಸಪ್ಪ ನಾಯಿಕ, ಲಕ್ಷ್ಮಣ ಹುಚರಡ್ಡಿ, ಬಸಪ್ಪ ಬಡಿಗೇರ, ಸಿ.ಪಿ. ಯಕ್ಷಂಬಿ, ಲಕ್ಕಪ್ಪ ಲೋಕುರಿ, ಅಡಿವೆಪ್ಪ ಕಂಕಾಳಿ, ನೇತೃತ್ವದ ವಿವಿಧ ತಂಡಗಳು ನದಿ ತೀರದ ಗ್ರಾಮಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ನದಿಗೆ ನೀರು ಹರಿಯುತ್ತಿರುವರಿಂದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖಂಡರು ಸಾರ್ವಜನಿಕರಿಗೆ ಮನವಿ ಮಾಡಿದರು. ಪ್ರವಾಹ ಭೀತಿಗೆ ಒಳಗಾಗಬಹುದಾದ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದ್ದು, ಸಾರ್ವಜನಿಕರು ಯಾವುದೇ ಭೀತಿಗೆ ಒಳಗಾಗಬಾರದು ಎಂದು ಇದೇ ಸಂದರ್ಭದಲ್ಲಿ ಎನ್‍ಎಸ್‍ಎಫ್ ಟೀಮ್ ಧೈರ್ಯ ತುಂಬಿ ಸುರಕ್ಷತೆ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿಕೊಂಡಿದೆ.
ಲೋಳಸೂರ, ಬಸಳಿಗುಂದಿ, ಮಸಗುಪ್ಪಿ, ವಡೇರಹಟ್ಟಿ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ತಿಗಡಿ, ಸುಣಧೋಳಿ ಮುಂತಾದ ನದಿ ತೀರದ ಗ್ರಾಮಗಳಿಗೆ ಮುಖಂಡರು ಭೇಟಿ ನೀಡಿದರು.

Related posts: