ಗೋಕಾಕ:ಪ್ರವಾಹ ಭೀತಿ ಹಿನ್ನೆಲೆ : ಮಂಗಳವಾರದಿಂದ ಗುರುವಾರವರೆಗೆ ನದಿ ತೀರದ ಗ್ರಾಮಗಳಿಗೆ ಶಾಸಕ ಬಾಲಚಂದ್ರ ಭೇಟಿ
ಪ್ರವಾಹ ಭೀತಿ ಹಿನ್ನೆಲೆ : ಮಂಗಳವಾರದಿಂದ ಗುರುವಾರವರೆಗೆ ನದಿ ತೀರದ ಗ್ರಾಮಗಳಿಗೆ ಶಾಸಕ ಬಾಲಚಂದ್ರ ಭೇಟಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 5 :
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಹಿಡಕಲ್ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ಸೋಮವಾರ ಮಧ್ಯಾಹ್ನದಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ಘಟಪ್ರಭಾ ನದಿಗೆ ಬಿಟ್ಟಿರುವುದರಿಂದ ನದಿ ತೀರದ ಗ್ರಾಮಗಳ ಸ್ಥಿತಿಗತಿಗಳನ್ನು ಅರಿಯಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಲ್ಲಿ ಮೂರು ದಿನಗಳವರೆಗೆ ಭೇಟಿ ನೀಡಲಿದ್ದಾರೆ.
ಸದ್ಯ ಬೆಂಗಳೂರಿನಲ್ಲಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೋಮವಾರ ರಾತ್ರಿ ಗೋಕಾಕಕ್ಕೆ ಆಗಮಿಸಲಿದ್ದು ಮಂಗಳವಾರ, ಬುಧವಾರ ಹಾಗೂ ಗುರುವಾರದಂದು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಪ್ರವಾಹ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಮ್ಮ ಎಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಗೋಕಾಕಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಗಮಿಸಿ ನಾಳೆಯಿಂದ ಮೂರು ದಿನಗಳವರೆಗೆ ಅರಭಾವಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಸ್ವತಃ ಭೇಟಿ ನೀಡಲಿದ್ದಾರೆ.