RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸುರಕ್ಷಿತ ಕಟ್ಟಡಗಳಲ್ಲಿ ಮಾತ್ರ ಕಲಿಕಾ ಪ್ರಕ್ರಿಯೆ ನಡೆಯಿಸಿ : ಶಿಕ್ಷಕರಿಗೆ ಬಿಇಓ ಬಳಗಾರ ಸೂಚನೆ

ಗೋಕಾಕ:ಸುರಕ್ಷಿತ ಕಟ್ಟಡಗಳಲ್ಲಿ ಮಾತ್ರ ಕಲಿಕಾ ಪ್ರಕ್ರಿಯೆ ನಡೆಯಿಸಿ : ಶಿಕ್ಷಕರಿಗೆ ಬಿಇಓ ಬಳಗಾರ ಸೂಚನೆ 

ಸುರಕ್ಷಿತ ಕಟ್ಟಡಗಳಲ್ಲಿ ಮಾತ್ರ  ಕಲಿಕಾ ಪ್ರಕ್ರಿಯೆ ನಡೆಯಿಸಿ : ಶಿಕ್ಷಕರಿಗೆ ಬಿಇಓ ಬಳಗಾರ ಸೂಚನೆ

 

 

ನಮ್ಮ ಬೆಳಗಾವಿ ಸುದ್ದಿ ಗೋಕಾಕ ಅ 5 :

 

 

ತಾಲೂಕಿನಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುಖ್ಯಗುರುಗಳು ಮಕ್ಕಳಿಗೆ ಸುರಕ್ಷಿತ ಕಟ್ಟಡಗಳಲ್ಲಿ ಮಾತ್ರ ಅಭ್ಯಾಸ ಪ್ರಕ್ರಿಯೆಯಲ್ಲಿ ಅಥವಾ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಬೇಕೆಂದು ಶಿಕ್ಷಣಾಧಿಕಾರಿ ಜೀ.ಬ.ಬಳಗಾರ ಆದೇಶಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾವುದೇ ಹಳೆಯ ಕಟ್ಟಡಗಳಲ್ಲಿ ಒಳಗಡೆ ಮಕ್ಕಳನ್ನು ಕೂಡಿಸಿ ಪಾಠ ಮಾಡಬಾರದು. ಈ ಬಗ್ಗೆ ಪ್ರತಿದಿನ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಹಳೆಯ ಕಟ್ಟಡಗಳ ಒಳಗಡೆ ಹಾಗೂ ಸಮೀಪ ಹೋಗದಂತೆ ಸೂಚಿಸಬೇಕು . ಅಲ್ಲದೆ ನಮ್ಮ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿಗಳು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳ ಮುಖ್ಯ ಗುರುಗಳೊಂದಿಗೆ ನಿರಂತರ ಸಂರ್ಪಕದಲಿದ್ದು ಕೊಂಡು ಯಾವುದೇ ಅವಘಡ ಸಂಭವಿಸಿದಂತೆ ನೋಡಿಕೊಳ್ಳುಬೇಕು . ಸಂಬಂಧಪಟ್ಟ ಶಾಲೆಯ ಮುಖ್ಯಗುರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರುಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು ಎಚ್ಚರಿಕೆವಹಿಸಬೇಕು

ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ತಕ್ಷಣ ಸಂಬಂಧಪಟ್ಟವರು ವರದಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ವರದಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಆದೇಶಿಸಿದ್ದಾರೆ.

Related posts: