RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪ್ರವಾಹ ಹಿನ್ನೆಲೆ : ನಿಮ್ರಾ ಆಸ್ಪತ್ರೆಯಲ್ಲಿ ಸಿಲುಕಿದ್ದ 25 ಕ್ಕೂ ಹೆಚ್ಚು ರೋಗಿಗಳ ಸುರಕ್ಷಿತ ರಕ್ಷಣೆ

ಗೋಕಾಕ:ಪ್ರವಾಹ ಹಿನ್ನೆಲೆ : ನಿಮ್ರಾ ಆಸ್ಪತ್ರೆಯಲ್ಲಿ ಸಿಲುಕಿದ್ದ 25 ಕ್ಕೂ ಹೆಚ್ಚು ರೋಗಿಗಳ ಸುರಕ್ಷಿತ ರಕ್ಷಣೆ 

ಪ್ರವಾಹ ಹಿನ್ನೆಲೆ : ನಿಮ್ರಾ ಆಸ್ಪತ್ರೆಯಲ್ಲಿ ಸಿಲುಕಿದ್ದ 25 ಕ್ಕೂ ಹೆಚ್ಚು ರೋಗಿಗಳ ಸುರಕ್ಷಿತ ರಕ್ಷಣೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 7 :

 

 
ಮಹಾ ಪ್ರವಾಹಕ್ಕೆ ಗುರಿಯಾಗಿ ಭಾಗಶಃ ಜಲಾವೃತ ಗೊಂಡಿರುವ ಗೋಕಾಕ ಅರ್ಧದಷ್ಟು ನಗರ ಜಲಾವೃತಗೊಂಡಿದ್ದು ನಿನ್ನೆ ರಾತ್ರಿ ಹಿಡಕಲ್ ಜಲಾಶಯದಿಂದ ಮತ್ತಷ್ಟು ನೀರು ಹರಿದು ಬಂದ ಪರಿಣಾಮವಾಗಿ ನಿನ್ನೆ ರಾತ್ರಿ ವಾಲ್ಮೀಕಿ ವೃತ್ತದ ಹತ್ತಿರ ಇರುವ ನಿಮ್ರಾ ಆಸ್ಪತ್ರೆಯ ಸಂಪೂರ್ಣ ಜಲಾವೃತವಾಗಿದೆ.
ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದ ಸುಮಾರು 25 ಕ್ಕೂ ಹೆಚ್ಚು ಒಳ ರೋಗಿಗಳು ಇಡಿ ರಾತ್ರಿ ಆಸ್ಪತ್ರೆಯಲ್ಲಿ ಸಿಲುಕಿ
ಆತಂಕದ ಪರಿಸ್ಥಿಯನ್ನು ಎದುರಿಸಿದ್ದಾರೆ.

ವಿಷಯ ತಿಳಿದು ಬುಧವಾರದಂದು ಬೆಳಗಿನ ಜಾವ ರಕ್ಷಣೆ ಧಾವಿಸಿದ ತಾಲೂಕಾಡಳಿತ ಮತ್ತು ನಗರಸಭೆ ಅಧಿಕಾರಿಗಳು
ಸುಮಾರು 25 ಕ್ಕೂ ಹೆಚ್ಚು ಒಳ ರೋಗಿಗಳನ್ನು ತ ಸುರಕ್ಷಿತವಾಗಿ ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ .

Related posts: