ಗೋಕಾಕ:ಜೀವ ಹಾನಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಗೋಳ್ಳಲು ಅಧಿಕಾರಿಗಳಿಗೆ ಮಾಜಿ ಸಚಿವ ರಮೇಶ ಮನವಿ
ಜೀವ ಹಾನಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಗೋಳ್ಳಲು ಅಧಿಕಾರಿಗಳಿಗೆ ಮಾಜಿ ಸಚಿವ ರಮೇಶ ಮನವಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 7 :
ಹಿಂದೆಯೂ ಕಂಡ ಕಾಣದಂತಹ ಪ್ರವಾಹ ಗೋಕಾಕ ತಾಲೂಕಿಗೆ ಆವರಿಸಿದ್ದು, ಸತತವಾಗಿ ಎಡಬಿಡದೆ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಹಿಡಕಲ್ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ಗೋಕಾಕ ನಗರ ಅರ್ಧದಷ್ಟು ನೀರಿನಲ್ಲಿ ಮುಳಗಿದ್ದು ಇಂದು ನಗರಕ್ಕೆ ದಾವಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮುಳುಗಡೆಗೊಂಡಿರುವ ಬ್ಯಾಳಿಕಾಟಾ, ಉಪ್ಪಾರ ಓಣಿ,ರವಿವಾರ ಪೇಠದ ತಂಬಾಕು ಕೂಟ್, ಕಿಲ್ಲಾ, ಬಣಗಾರ ಓಣಿ, ಮಾರ್ಕೆಂಡೆಯ ನಗರ, ಚಿಕ್ಕೋಳಿ ಸೇತುವೆ ಸೇರಿದಂತೆ ಅನೇಕ ಮುಳುಗಡೆ ಪ್ರದೇಶಗಳನ್ನು ವಿಕ್ಷಿಸಿ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ , ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಅಡುಗೆ ಕೋಣೆಗಳನ್ನು ಪರಿಶೀಲಿಸಿ , ಸಂತ್ರಸ್ತರಿಗೆ ಸ್ವಂತಾನ ಹೇಳಿದರು
ಇದಕ್ಕೂ ಮುಂಚೆ ನಗರದ ಜಿ.ಆರ್.ಬಿ.ಸಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಯಿಸಿ ಜೀವಹಾನಿ ಸಂಭವಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ , ಡಿ.ಎಸ್.ಪಿ ಡಿ.ಟಿ.ಪ್ರಭು, ಪೌರಾಯುಕ್ತ ಶಿವಾನಂದ ಹಿರೇಮಠ, ವಿಠಲ ತಡಸಲೂರ, ಪಿಎಸ್ಐ ಗುರುನಾಥ್ ಚೌವಾಣ, ಹಿರಿಯ ನಗರಸಭೆ ಸದಸ್ಯ ಎಸ್.ಎ.ಕೋತವಾಲ, ಗಿರೀಶ್ ಖೋತ , ಮಾಜಿ ನಗರಾಧ್ಯಕ್ಷ ಸಿದ್ದಲಿಂಗ ದಳವಾಯಿ ಸೇರಿದಂತೆ ಇತರರು ಇದ್ದರು