ಗೋಕಾಕ:ಪ್ರವಾಹ ಹಿನ್ನೆಲೆ: ಸಂತ್ರಸ್ತರ ನೆರವಿಗೆ ದಾವಿಸುತ್ತಿರುವ ನಗರದ ಸಂಘ,ಸಂಸ್ಥೆಗಳು
ಪ್ರವಾಹ ಹಿನ್ನೆಲೆ: ಸಂತ್ರಸ್ತರ ನೆರವಿಗೆ ದಾವಿಸುತ್ತಿರುವ ನಗರದ ಸಂಘ,ಸಂಸ್ಥೆಗಳು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 7 :
ಸತತ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಜಲಾವೃತಗೊಂಡಿರುವ ಗೋಕಾಕ ತಾಲೂಕ ಅಕ್ಷರಶಃ ತತ್ತರಿಸಿ ಹೋಗಿದೆ . ಹಿಂದೆಂದೂ ಕಾಣದ ಪ್ರವಾಹ ಪರಿಸ್ಥಿಯನ್ನು ಕಾಣುತ್ತಿರುವ ಗೋಕಾಕಿನ ಜನತೆ ಪ್ರವಾಹದ ಹೋಡೆತಕ್ಕೆ ಭಾಗಶಃ ಕಂಗಾಲಾಗಿದ್ದಾರೆ.
ಸುಮಾರು 500 ಕ್ಕೂ 500ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಜನರು ಪರಿತಪ್ಪಿಸುವ ಧಾರುಣ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಳುಗಡೆ ಗೊಂಡು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ತಾಲೂಕಿಡಳಿತದಿಂದ ಸಕಲ ಸೌಕರ್ಯಗಳನ್ನು ನೀಡಲಾಗುತ್ತಿದ್ದು , ನಗರದ ಸಂಘ,ಸಂಸ್ಥೆಯ ಪದಾಧಿಕಾರಿಗಳು ದೌಡಾಯಿಸಿ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ. ರೋಟ್ಟಿ , ಚಪ್ಪಾತಿ, ಉಪ್ಪಿಟ್ಟು , ಅನ್ನ , ಬ್ರೇಡ, ಬಿಸ್ಕೆಟ್, ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ .
ನಗರದ ಜೆಸಿಐ ಸಂಸ್ಥೆ, ರೋಟರಿ ಸಂಸ್ಥೆ, ಸತೀಶ ಜಾರಕಿಹೊಳಿ ಫೌಂಡೇಶನ್, ಶ್ರೀರಾಮ ಸೇನೆ, ಪಾಪುರ್ಲ ಪ್ರಂಟ್ ಆಫ್ ಇಂಡಿಯಾ ಸೇರಿದಂತೆ ನಗರದ ವಿವಿಧ ಸಮಾಜ ಭಾಂಧವರು ಗಂಜಿ ಕೇಂದ್ರದಲ್ಲಿರುವ ಜನರಿಗೆ ಅಗತ್ಯ ಸೌಕರ್ಯ ಒದಗಿಸುವಲ್ಲಿ ನಿರತರಾದರೆ
ಇಲ್ಲಿಯ ಎಕ್ಖಪೋರ್ಲ ಡಿ ಔಟಡೋರ್ ಸಂಸ್ಥೆಯ ಮುಖ್ಯಸ್ಥ ಅಯ್ಯೂಬ ಖಾನ ನೇತೃತ್ವದ ತಂಡ ಮುಳುಗಡೆ ಗೊಂಡಿರುವ ಜನರನ್ನು ಬೋಟ ಮುಖಾಂತರ ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದೆ.