ಗೋಕಾಕ:ನೆರೆ ಸಂತ್ರಸ್ಥರು ಹೆದರದಿರಲು ಎಸಿ ಶಿವಾನಂದ ಭಜಂತ್ರಿ ಮನವಿ
ನೆರೆ ಸಂತ್ರಸ್ಥರು ಹೆದರದಿರಲು ಎಸಿ ಶಿವಾನಂದ ಭಜಂತ್ರಿ ಮನವಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 8 :
ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದ್ದು , ಯಾರು ಆತಂಕ ಪಡಬಾರದು ಎಂದು ಎಸಿ ಶಿವಾನಂದ ಭಜಂತ್ರಿ ಮನವಿ ಮಾಡಿದ್ದಾರೆ.
ಪತ್ರಕೆಯೊಂದಿಗೆ ಮಾತನಾಡಿರುವ ಅವರು ಇಂದು ಮುಂಜಾನೆ 7 ಗಂಟೆಗೆ ಮೂರು ಜಲಾಶಯಗಳಿಂದ 1.67 ಲಕ್ಷ ಕ್ಯೂಸೆಕ್ಸ ನೀರನ್ನು ಬಿಡಲಾಗಿದೆ. ಕಳೆದ 4 ದಿನಗಳಿಂದ ನೆರೆ ಹಾವಳಿಯಿಂದ ಬಸವಳಿದಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸೇನೆಯಿಂದ ಎನ್‍ಡಿಆರ್ ಎಫ್ ನ ಮೂರು ತಂಡಗಳು ಕಾರ್ಯನಿರತವಾಗಿವೆ. ಕೆಲವು ಕಿಡಿಗೇಡಿಗಳು ಕೆಲವೊಂದು ಉಹಾಪೋಹಗಳನ್ನು ಹಬ್ಬಿಸುತ್ತಿದ್ದು ಅದಕ್ಕೆ ಕಿವಿ ಕೊಡದೆ ಧೈರ್ಯದಿಂದ ಇದ್ದು ಜಾಗೃತಿವಹಿಸಿಕೊಂಡು ಅಧಿಕಾರಿಗಳ ಹಾಗೂ ಪೋಲಿಸರು ನೀಡುವಂತಹ ಸೂಚನೆಗಳನ್ನು ಪಾಲಿಸಬೇಕು. ಸಂಜೆ ವೇಳೆಗೆ ನೀರನ್ನು ಬಿಡುವ ಸಾಧ್ಯತೆ ಕಡಿಮೆ ಇದೆ ಯಾರು ದೃತಿಕೆಡಬಾರದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾ.ಪಂ ಅಧಿಕಾರಿ ಬಸವರಾಜ ಹೆಗ್ಗನಾಯಿಕ ಇದ್ದರು