ಗೋಕಾಕ:ಪ್ರವಾಹ ಹಿನ್ನೆಲೆ : ನೆರವಿಗೆ ಸರಕಾರವನ್ನು ಪಕ್ಕಕ್ಕಿಟ್ಟು, ಭರದಿಂದ ದಾವಿಸುತ್ತಿರುವ ಸಾರ್ವಜನಿಕರು
ಪ್ರವಾಹ ಹಿನ್ನೆಲೆ : ನೆರವಿಗೆ ಸರಕಾರವನ್ನು ಪಕ್ಕಕ್ಕಿಟ್ಟು, ಭರದಿಂದ ದಾವಿಸುತ್ತಿರುವ ಸಾರ್ವಜನಿಕರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 10 :
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರತದ ಪ್ರಮಾಣದ ಮಳೆಯಿಂದಾಗಿ ಗೋಕಾಕ ತಾಲೂಕು ತತ್ತರಿಸಿ ಹೋಗಿದ್ದು , ಜಾತಿ ಮತ ಪಂಥ ಸಂತ್ರಸ್ತರ ನೆರೆವಿಗೆ ಹಲವಾರು ಸಂಘಟನೆಗಳು , ಸಾರ್ವಜನಿಕರು ದಾವಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಸರಕಾರದಿಂದ ತಾಲೂಕಿನಾದ್ಯಂತ 50 ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು ,ಅವು ಹೆಸರಿಗೆ ಮಾತ್ರ ಅವು ಹೆಸರಿಗೆ ಮಾತ್ರ ಎಂಬಂತೆ ವಾಗಿವೆ ತಾಲೂಕಾಡಳಿತ ವತಿಯಿಂದ ಈ ಗಂಜಿ ಕೇಂದ್ರಗಳಿಗೆ ಊಟ – ಉಪಚಾರ, ಔಷಧಿ, ಹೊದಿಕೆ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬೇಕು ಆದರೆ ಅದ್ಯಾವ ಕಾರ್ಯಗಳು ತಾಲೂಕಾಡಳಿತ ವತಿಯಿಂದ ಆಗುತ್ತಿಲ್ಲ ಬದಲಾಗಿ ಸ್ಥಳೀಯ ಸಂಘ, ಸಂಸ್ಥೆಗಳು , ವಿವಿಧ ಸಮಾಜ ಭಾಂಧವರಿಂದ ಈ ಎಲ್ಲ ಕಾರ್ಯಗಳು ನಡೆಯುತ್ತಿವೆ. ಪ್ರವಾಹದ ವಿಕೋಪಕ್ಕೆ ತುತ್ತಾಗಿರುವ ನಿರಾಶ್ರಿತರನ್ನು ತಮ್ಮ ಕುಟುಂಬ ಸದಸ್ಯರೆಂದು ಭಾವಿಸಿ ದೈನಂದಿನ ಅಗತ್ಯ ವಸ್ತುಗಳನ್ನು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಿಗೆ ತಲುಪಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ.
ಕರವೇಯಿಂದ ಟೂತಪೇಸ್ಟ,ಬ್ರಶ್,ಎಣ್ಣೆ ವಿತರಣೆ: ಸ್ಥಳೀಯ ಕರವೇ ಸಂಘಟನೆಯಿಂದ ನಗರದ ವಿವಿಧ ಗಂಜಿ ಕೇಂದ್ರಗಳಲ್ಲಿ ಟೂಥಪೇಸ್ಟ, ಬ್ರಶ್ , ಎಣ್ಣೆ ವಿತರಿಸಲಾಯಿತು.
ಪಿಎಫ್ಐ ಸಂಘಟನೆಯಿಂದ ಅರಿವೆ, ಹೊದಿಕೆ, ಹಣ್ಣು ಹಂಪಲ ವಿತರಣೆ : ನಗರದ ಪಿಎಫ್ಐ ಸಂಘಟನೆ ವತಿಯಿಂದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಅರಿವೆ, ಹಣ್ಣು ಹಂಪಲ್, ಹೊದಿಕೆ ಯಂತಹ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಜಲಾವೃತಗೊಂಡಿರುವ ಶಿಂಗಳಾಪೂರ ಗ್ರಾಮದಲ್ಲಿ ರೈತರಿಗೆ ಮೇವು, ಜಾಕೆಟ್ ವಿತರಿಸಲಾಯಿತು