RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಸಮೋರೋಪಾದಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕೆಂದು : ಮಾಜಿ ಸಚಿವ ರಮೇಶ

ಗೋಕಾಕ:ಸಮೋರೋಪಾದಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕೆಂದು : ಮಾಜಿ ಸಚಿವ ರಮೇಶ 

ಸಮೋರೋಪಾದಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕೆಂದು : ಮಾಜಿ ಸಚಿವ ರಮೇಶ

 

 

ನಮ್ಮ ಬೆಳಗಾವಿ ಸುಗೋಕಾಕ ಅ 11 :

 

 

ಪ್ರವಾಹದಿಂದ ನಿರಾಶ್ರಿತರಾದ ಜನತೆಗೆ ಸಮೋರೋಪಾದಿಯಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕೆಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ರವಿವಾರದಂದು ಇಲ್ಲಿಯ ನಗರಸಭೆಯ ಸಭಾ ಭವನದಲ್ಲಿ ಅಧಿಕಾರಿಗಳ, ನಗರಸಭೆ ಸದಸ್ಯರ ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನಿರಾಶ್ರಿತರಿಗೆ ಶಾಶ್ವತ ವಸತಿಯನ್ನು ಕಲ್ಪಿಸುವ ನಿಟ್ಟಿಯಲ್ಲಿ ಪರಿಶೀಲನೆ ನಡೆಸಿ, ಸಂತ್ರಸ್ತರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ವಸತಿಗಳನ್ನು ನಿರ್ಮಾಣ ಮಾಡುವವರೆಗೂ ಅವರಿಗೆ ತಾತ್ಕಾಲಿಕವಾಗಿ ವಾಸಿಸಲು ವಸತಿಯನ್ನು ಕಲ್ಪಿಸಿ ಅಲ್ಲಿ ಅವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಸಲು ನಾವೆಲ್ಲ ಶ್ರಮಿಸೋಣ ಎಂದು ತಿಳಿಸಿದರು.
ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರ ಪರಿಹಾರ ನೀಡಲು ಎಲ್ಲರೂ ಕೂಡಿಕೊಂಡು ಒತ್ತಾಯಿಸೋಣ, ನೆರೆ ಪೀಡಿತ ಪ್ರದೇಶಗಳಲ್ಲಿ ನೆರೆ ಹಾವಳಿಯು ಕಡಿಮೆಯಾದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಮುಖಂಡರು ಮತ್ತು ಸಂಘ-ಸಂಸ್ಥೆಗಳನ್ನು ಈ ಕಾರ್ಯಕ್ಕೆ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ನಾವು ಹಿಂದೆಂದು ನೋಡದಂತಹ ಸಂಕಷ್ಟ ಗೋಕಾಕ ತಾಲೂಕಿಗೆ ಎದುರಾಗಿದ್ದು ನಾವೆಲ್ಲ ಕುಗ್ಗದೇ ಯಾವುದೇ ಊಹಾ-ಪೋಹಗಳಿಗೆ ಕಿವಿಕೊಡದೇ ಎಲ್ಲರೂ ಸಂಘಟಿತರಾಗಿ ವಸತಿ-ಹೀನರಿಗೆ ಬದುಕನ್ನು ಪುನರ ನಿರ್ಮಿಸಲು ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭೆ ಹಿರಿಯ ಸದಸ್ಯ ಎಸ್.ಎ.ಕೋತವಾಲ ಮಾತನಾಡಿ ನಗರದಲ್ಲಿ ಪ್ರವಾಹದಿಂದ ನೂರಾರು ಕೋಟಿ ರೂ.ಗಳಷ್ಷಟು ಹಾನಿಗೊಳಗಾಗಿದ್ದು ಅದನ್ನು ತುಂಬಲು ತುರ್ತಾಗಿ 50 ಕೋಟಿ ರೂಗಳನ್ನಾದರು ಸರ್ಕಾರ ಬಿಡುಗಡೆ ಮಾಡಬೇಕು. ಇಲ್ಲಿ ಆದ ಹಾನಿಗಳ ಬಗ್ಗೆ ಸರ್ಕಾರಕ್ಕೆ ನಗರಸಭೆಯಿಂದ ವರದಿಯನ್ನು ತಯಾರಿಸಿ ಸರ್ಕಾರ ಗಮನವನ್ನು ಸೆಳೆಯಲು ಪ್ರಯತ್ನ ಮಾಡುವುದ ಅತಿ ಅವಶ್ಯವಾಗಿದೆ ಎಂದು ಹೇಳಿದರು.
ಪೌರಾಯುಕ್ತ ಶಿವಾನಂದ ಹಿರೇಮಠ ಹಾಗೂ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ಮಾತನಾಡಿ ಗೋಕಾಕ ನಗರ ಎದುರಿಸುತ್ತಿರುವ ಪ್ರವಾಹದ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಈ ತುರ್ತು ಕಾರ್ಯದಲ್ಲಿ ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ|| ಆರ್.ಎಸ್.ಬೆಣಚಿನಮರಡಿ, ನಗರಸಭೆ ಅಧಿಕಾರಿಗಳಾದ ವಿ.ಎಸ್.ತಡಸಲೂರ,ಎಮ್.ಎಚ್.ಗಜಾಕೋಶ, ನಗರಸಭೆ ಸದಸ್ಯರು ಮುಖಂಡರು ಇದ್ದರು.

Related posts: