RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ

ಗೋಕಾಕ:ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ 

ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುತ್ತಿರುವ ಸಮಾಜದ ಮುಖಂಡ ಎಸ್.ಎ.ಕೋತವಾಲ ಮತ್ತು ಇಲಾಹಿ ಖೈರದಿ

ತೀವ್ರ ಪ್ರವಾಹ ಹಿನ್ನೆಲೆ: ಗೋಕಾಕದಲ್ಲಿ ಮಂಕಾದ ಈದ್ ಆಚರಣೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 12 :

 

ಈದುಲ್ ಅಝ್ಹಾ ( ಬಕ್ರೀದ್) ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸುತ್ತಿರುವ ಸಮಾಜ ಬಾಂಧವರು

 

 
ಭೀಕರ ಪ್ರವಾಹಕ್ಕೆ ತುತ್ತಾಗಿರುವ ಗೋಕಾಕ ತಾಲೂಕಿನಾದ್ಯಂತ ಸೋಮವಾರ ಮುಸ್ಲಿಮ್ ಬಾಂಧವರು ಈದುಲ್ ಅಝ್ಹಾ(ಬಕ್ರೀದ್) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಭಾರೀ ಪ್ರವಾಹ ಅಪ್ಪಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಈದುಲ್ ಅಝ್ಹಾ ಆಚರಣೆ ಮಂಕಾದಂತೆ ಭಾಸವಾಯಿತು .

ಇಲ್ಲಿಯ ಜಾಮೀಯ ಮಸೀದಿಯ ಮೌಲಾನಾ ತಲಾಸಾಬ ಮತ್ತು ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು. 
ನಗರದ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಕಲ ಮನುಕುಲದ ಉದ್ಧಾರಕ್ಕಾಗಿ ಪ್ರಾರ್ಥಿಸಲಾಯಿತು .

ಹಬ್ಬದ ಸಂಭ್ರಮದಲ್ಲೂ ಮಾನವೀಯತೆ ಮೆರೆದ ಮುಸ್ಲಿಮ್ ಬಾಂಧವರು :

ಕಳೆದ ಐದು ದಿನಗಳಿಂದ ಸುರಿದ ಧಾರಾಕಾರವಾಗಿ ಸುರಿದ ಭಾರಿ ಮಳೆಯಿಂದ ಘಟಪ್ರಭೆ, ಹೀರಣ್ಯಕೇಶಿ, ಮಾರ್ಕೆಂಡೆಯ ನದಿಗಳ ಹೊರ ಹರಿವು ಹೆಚ್ಚಾಗಿ ಗೋಕಾಕ ತಾಲೂಕು ಹಿಂದೆಂದು ಕಾಣದ ಭೀಕರ ಪ್ರವಾಹವನ್ನು ಎದುರಿಸಿ ಅಂದಾಜು 2000 ಕ್ಕೂ ಹೆಚ್ಚು ಮನೆಗಳು ಬಿದ್ದು ,ಸಾವಿರಾರು ಜನರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇವರು ದುಃಖದಲ್ಲಿ ಬಾಗಿಯಾಗಲು ಚಿಕ್ಕ ಪ್ರಯತ್ನವಾಗಿ ಇಲ್ಲಿಯ ಜಮೆತೆ ಉಲ್ಲಮಾಹೆ – ಹಿಂದ್ ಮತ್ತು ಅಂಜುಮನ್ – ಎ – ಇಸ್ಲಾಂ ಸಂಸ್ಥೆಗಳಿಂದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿ ಮಾನವೀಯತೆ ಮೆರೆದರು.

ಬಕ್ರೀದ್ ಗೂ ತಟ್ಟಿದ ಪ್ರವಾಹ ಬಿಸಿ :

ವರ್ಷದಲ್ಲಿ ಎರೆಡು ಸಾರಿ ಈದ್ಗಾ ಮೈದಾನದಲ್ಲಿ ಜರಗುವ ವಿಶೇಷ ಪ್ರಾರ್ಥನೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದ ಮುಸ್ಲಿಂ ಬಾಂಧವರು ಭೀಕರ ಪ್ರವಾಹಕ್ಕೆ ತುತ್ತಾಗಿ ದುಃಖದಲ್ಲಿರುವದರಿಂದ ಈ ಬಾರಿಯ ಈದ್ ಸರಳವಾಗಿ ಆಚರಿಸಿದ್ದು ಕಂಡು ಬಂದಿತ್ತು . ಸಂಪೂರ್ಣ ತುಂಬಿ ತುಳುಕುತ್ತಿದ ಈದ್ಗಾ ಮೈದಾನ ಪ್ರವಾಹದ ಹಿನ್ನಲೆಯಲ್ಲಿ ಇಂದು ಅರ್ಥದಷ್ಟು ತುಂಬಿರಲಿಲ್ಲ . ಎಲ್ಲರ ಮುಖದಲ್ಲಿ ಜಲಪ್ರಳಯದ ಕರಾಳ ಛಾಯೆ ಆಗವಿಸಿತ್ತು .

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್.ಎ.ಕೋತವಾಲ, ಇಲಾಹಿ ಖೈರದಿ, ಅಕ್ಬರ್ ಜಮಾದಾರ,ಸಲ್ಲಿಂ ಅಮಲಜರಿ,ಯಾಸಿನ್ ನಧಾಪ, ಇಬ್ರಾಹಿಂ ಚೌಗಲಾ ಸೇರಿದಂತೆ ಇತರರು ಇದ್ದರು

Related posts: