ಗೋಕಾಕ:ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ
ನೆರೆ ಸಂತ್ರಸ್ಥರಿಗೆ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ಮಮದಾಪೂರ ಗ್ರಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಜಯಶ್ರೀ ಕೊಣ್ಣೂರ ಅವರು ವಿತರಿಸುತ್ತಿರುವುದು.
ಜಯಶ್ರೀ ಕೊಣ್ಣೂರ ಅವರಿಂದ ಗಂಜಿ ಕೇಂದ್ರಗಳಿಗೆ ಚಾದರ್, ಬೆಡ್ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳ ವಿತರಣೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ, 12 :-
ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ಮನೆಗಳು ಸಂಪೂರ್ಣ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಸ್ವಾಂತಾನ ಹೇಳಿ ಧೈರ್ಯ ತುಂಬಿದ ಮಮದಾಪೂರ ಗ್ರಾ.ಪಂ.ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಜಯಶ್ರೀ ಕೊಣ್ಣೂರ ಅವರು ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.
ಅವರು, ತಾಲೂಕಿನ ತಾಲೂಕಿನ ಮಮದಾಪೂರ, ದುಂಡಾನಟ್ಟಿ, ಶಿವಾಪೂರ, ಅಜ್ಜನಕಟ್ಟಿ ಗ್ರಾಮಗಳಲ್ಲಿ ತೆರೆದ ಗಂಜಿ ಕೇಂದ್ರಗಳಿಗೆ ತೆರಳಿ ಚಾದರ್, ಬೆಡ್ಶೀಟ್, ಟವಲ್, ಸೀರೆ, ರವಿಕೆ, ಔಷಧಿಗಳು, ಬಟ್ಟೆಗಳು, ಚಿಕ್ಕಮಕ್ಕಳಿಗೆ ಡೈಫರ್ ಸೇರಿದಂತೆ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಮದಾಪೂರ ಗ್ರಾ.ಪಂ.ಮಾಜಿ ಅಧ್ಯಕ್ಷ ಹನಮಂತ ಗೋಪಾಳಿ, ಸ್ನೇಹಾ ಕೊಣ್ಣೂರ ಸೇರಿದಂತೆ ಅನೇಕರು ಇದ್ದರು.