RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸತೀಶ ಶುಗರ್ಸ ಕಾರಖಾನೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರವಾಹ ಪೀಡಿತ ಶಾಲೆಗಳಲ್ಲಿ ಶ್ರಮದಾನ

ಗೋಕಾಕ:ಸತೀಶ ಶುಗರ್ಸ ಕಾರಖಾನೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರವಾಹ ಪೀಡಿತ ಶಾಲೆಗಳಲ್ಲಿ ಶ್ರಮದಾನ 

ಸತೀಶ ಶುಗರ್ಸ ಕಾರಖಾನೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರವಾಹ ಪೀಡಿತ ಶಾಲೆಗಳಲ್ಲಿ ಶ್ರಮದಾನ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಅ 17 :

 

 

ಪ್ರವಾಹ ಪೀಡಿತ ಪ್ರದರ್ಶಗಳಲ್ಲಿ ಬರುವ ಸರಕಾರಿ ಶಾಲೆಗಳನ್ನು ಸತೀಶ ಶುಗರ್ಸ ಲಿ. ಹುಣ್ಣಶ್ಯಾಳ ಪಿ.ಜಿ ಯ ಸಿಬ್ಬಂದಿಗಳು , ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಮಂಗಳೂರಿನ ಸುನ್ನಿ ಸ್ಟುಡೆಂಟ್ ಫೆಡರೇಷನ್ ಅವುಗಳ ಸಂಯುಕ್ತಾಶ್ರಯದಲ್ಲಿ ಟ್ಯ್ರಾಕ್ಟರ್, ಜೆಸಿಬಿಗಳನ್ನು ಬಳಸಿ ಸ್ವಚ್ಛಗೊಳಿಸಿ, ಶ್ರಮದಾನ ಮಾಡಲಾಯಿತು .

ನಗರದ ನದಿ ತೀರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ.ನಂ 1ಮತ್ತು ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ,ನಂ 1 ಮಹಾ ಪ್ರವಾಹದ ಸುಳಿಗೆ ಸಿಲುಕಿ ಸಂಪೂರ್ಣ ಜಲಾವೃತವಾಗಿದ್ದವು

ಸತೀಶ ಶುಗರ್ಸ ಕಾರಖಾನೆ ವತಿಯಿಂದ ಕಳೆದ ನಾಲ್ಕು ದಿನಗಳಿಂದ ನಗರಾದ್ಯಂತ ನಡೆಯುತ್ತಿರುವ ಬಿದ್ದ ಮನೆಗಳ ತೆರುವು , ರಸ್ತೆಗಳಲ್ಲಿ ಬಿದ್ದಿರುವ ತ್ಯಾಜ್ಯ ತೆರುವು , ಜಲಾವೃತಗೊಂಡಿರುವ ಶಾಲೆಗಳ ಸ್ವಚ್ಚತಾ ಕಾರ್ಯದ ನೇತೃತ್ವವನ್ನು ವಹಿಸಿ ಕೊಂಡಿರುವ ಸತೀಶ ಜಾರಕಿಹೊಳಿ ಫೌಂಡೇಶನ್ ನ ರಿಯಾಜ ಚೌಗಲಾ ಮತ್ತು ಆರೀಫ ಪೀರಜಾದೆ ಅವರು ನಗರದಲ್ಲಿ ಪರಿಣಾಮಕಾರಿಯಾಗಿ ಸ್ವಚ್ಚತಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ‌ ಸತೀಶ ಶುಗರ್ಸ ಕಾರಖಾನೆಯ ಜಿ.ಬಿ.ಮಲ್ಲನ್ನವರ ,ಮಂಗಳೂರಿನ ಅಲ್ ಖಾದಿಸ ಕಾಲೇಜ ಆಫ್ ಇಸ್ಲಾಮಿಕ್ ಸೈಯಿನ್ಸ್ ಪ್ರಾಚಾರ್ಯ ಹಾಫೀಜ ಮಹಮ್ಮದ್ ಸುಫೀಯಾನ ಸಕಾಫಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಕೃಷ್ಣಾ ಖಾನಪ್ಪನವರ, ಈರಣ್ಣಾ ನರಸನ್ನವರ, ಮಹಾಂತೇಶ ಮರಕಟ್ಟಿ,ಹಣುಮಂತ ಅಮ್ಮಣಗಿ, ಮಸ್ತಾನ ಚೌಧರಿ, ಶಿಕ್ಷಕ ಢವಳೇಶ್ವರ, ಎಸ್.ಎಲ್.ಕಪ್ಪಲಗುದ್ದಿ , ಜಿ.ಎಸ್.ಫಡತಾರೆ, ಎಸ್.ಎಸ್.ಮುನ್ನೋಳಿ, ಶಾರುಖ್ ದೇಸಾಯಿ, ಮಹಾಂತೇಶ ಹಿರೇಮಠ , ಸತೀಶ ಬಿದರಿ,ಪವನ ದೇಸಾಯಿ
ಸೇರಿದಂತೆ ಸತೀಶ ಶುಗರ್ಸ ನ ಕಾರ್ಮಿಕರು , ಕರವೇ ಮತ್ತು ಮಂಗಳೂರಿನ ಸುನ್ನಿ ಸ್ಟುಡೆಂಟ್ ಫೆಡರೇಷನ್ ನ ಕಾರ್ಯಕರ್ತರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ್ದರು

Related posts: