RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನೆರೆ ಪ್ರದೇಶದ ಸ್ವಚ್ಛತೆ ಪರಿಶೀಲಿಸಲು ಹೋಗಿ ಆರತಿ ಸ್ವೀಕರಿಸಿದ ಮಾಜಿ ಸಚಿವ ಸತೀಶ

ಗೋಕಾಕ:ನೆರೆ ಪ್ರದೇಶದ ಸ್ವಚ್ಛತೆ ಪರಿಶೀಲಿಸಲು ಹೋಗಿ ಆರತಿ ಸ್ವೀಕರಿಸಿದ ಮಾಜಿ ಸಚಿವ ಸತೀಶ 

ಗುರರಾಘವೇಂದ್ರ ಮಠದಲ್ಲಿ ಆರತಿ ಸ್ವೀಕರಿಸುತ್ತಿರುವ ಮಾಜಿ ಸಚಿವ ಸತೀಶ

ನೆರೆ ಪ್ರದೇಶದ ಸ್ವಚ್ಛತೆ ಪರಿಶೀಲಿಸಲು ಹೋಗಿ ಆರತಿ ಸ್ವೀಕರಿಸಿದ ಮಾಜಿ ಸಚಿವ ಸತೀಶ

 

 

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 18 :

 

 
ಪ್ರವಾಹದಿಂದ ಹಾನಿಗೋಳಗಾಗಿರುವ ಪ್ರದೇಶಗಳಲ್ಲಿ ಸತೀಶ ಶುಗರ್ಸ ಕಾರಖಾನೆ ಅವರಿಂದ ಸ್ವಚ್ಚತಾ ಕಾರ್ಯಗಳು ನಡೆಯುತ್ತಿದ್ದು , ಶನಿವಾರದಂದು ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಲು ಬಂದಿದ್ಧ ಮಾಜಿ ಸಚಿವ ಮೌಢ್ಯ ವಿರೋಧಿ ಹೋರಾಟಗಾರ ನಾಸ್ತಿಕ ಸತೀಶ ಜಾರಕಿಹೊಳಿ ಅವರು ಆರತಿ ಸ್ವೀಕರಿಸಿ ಸುದ್ದಿಯಾಗಿದ್ದಾರೆ

ನಗರದ ಕಿಲ್ಲಾದಲ್ಲಿರುವ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಲು ಆಗಮಿಸಿದ್ದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಶ್ರೀ ಗುರುರಾಘವೇಂದ್ರ ಮಠದಲ್ಲಿ ಬ್ರಾಹ್ಮಣ ಸಮಾಜ ಭಾಂಧವರು ಸತ್ಕರಿಸಿದ್ದರು ಈ ಸಂದರ್ಭದಲ್ಲಿ ಮಾಜಿ ಸಚಿವ ಸತೀಶ ಆರತಿ ಸ್ವೀಕರಿಸದ ಸಂದರ್ಭ ಅಲ್ಲಿ ನೆರೆದಿದ್ದ ಜನರನ್ನು ಫೇಚಿಗೆ ಸಿಲುಕುವಂತೆ ಮಾಡಿತ್ತು

ಕಳೆದ ಐದು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆಯನ್ನು ಪ್ರಾರಂಭಿಸಿ ಮೂಢನಂಬಿಕೆ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಯಿಸಿ ಜಾಗೃತಿ ಮೂಡಿಸುತ್ತಿರುವ ಸತೀಶ ಜಾರಕಿಹೊಳಿ ಅವರು ಗುರುರಾಘವೇಂದ್ರ ಮಠದಲ್ಲಿ ಆರತಿ ಸ್ವೀಕರಿಸಿ ‌ಸುದ್ದಿಯಾಗಿದ್ದಾರೆ .

Related posts: