RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನೆರೆ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಬಟ್ಟೆ,ಆಹಾರಧ್ಯಾನ ವಿತರಣೆ

ಗೋಕಾಕ:ನೆರೆ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಬಟ್ಟೆ,ಆಹಾರಧ್ಯಾನ ವಿತರಣೆ 

ನಗರದಲ್ಲಿ ಜಲಪ್ರಳಯದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಬಟ್ಟೆ, ಪಂಚೆ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಮುಸಗುಪ್ಪಿ ಗ್ರಾಮಕ್ಕೆ ಕಳುಹಿಸುತ್ತಿರುವ ಗಣ್ಯರು

ನೆರೆ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಬಟ್ಟೆ,ಆಹಾರಧ್ಯಾನ ವಿತರಣೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 18 :

 
ದಿವಂಗತ ದೀಪಾ ನಾಯ್ಕರ ಸೇವಾ ಸಮಿತಿ ಗೋಕಾಕ ಹಾಗೂ ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ (ರಿ) ದೊಡ್ಡಬಳ್ಳಾಪುರ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರವಾಹದಿಂದ ನಿರಾಶ್ರಿತರಾದ ತಾಲೂಕಿನ ಮುಸಗಪ್ಪಿ ಗ್ರಾಮದ ಜನತೆಗೆ ಹೊಸ ಬಟ್ಟೆ ,ಪಂಚೆ ಸೇರಿದಂತೆ ಊಟೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು .

ದೊಡ್ಡಬಳ್ಳಾಪುರ ದಿಂದ ಬಂದ ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ (ರಿ) ನ ಪದಾಧಿಕಾರಿಗಳನ್ನು ನಗರದ ಹೊಸಪೇಠ ಗಲ್ಲಿಯಲ್ಲಿ ಸ್ವಾಗತಿಸಿ ನೆರೆ ಪೀಡತ ಮುಸಗುಪ್ಪಿ ಗ್ರಾಮಕ್ಕೆ ಕಳುಹಿಸಲಾಯಿತು

ನೆರೆ ಪೀಡಿತ ಮುಸಗುಪ್ಪಿ ಗ್ರಾಮದಲ್ಲಿಯ ಮನೆ ಮನೆಗಳಿಗೆ ತೆರಳಿ ಪಂಜೆ ,ಬಟ್ಟೆ ಸೇರಿದಂತೆ ಇನ್ನೀತರ ದಿನ ಬಳಕೆಯ ಅಗತ್ಯ ವಸ್ತುಗಳನ್ನು. ವಿತರಿಸಲಾಯಿತು

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ (ರಿ) ನ ಪ್ರಮೋದ ಮೌಲಿಕ, ನಾಗೇಶ ಬಾಬು, ಶಿವು ಓಂಕಾರ, ಅಮಿತ ಶ್ರೀಧರ, ಮುಖಂಡರಾದ ಸುನೀಲ ಮುರ್ಕಿಭಾವಿ , ಕೇದಾರಿ ಜಾಧವ, ಮಹೇಶ ಗಣಾಚಾರಿ,ರಫೀಕ ಮೋಮಿನ, ಮುಸ್ತಾಕ ಖಂಡಾಯತ, ಜಾವೇದ ಸಾರವಾನ,ಶೇಖರ ಅಂಬಿಗೇರ, ಭೀಮಶಿ ಮೋರೆ, ಅಬ್ಬು ಮುಜಾವರ ಸೇರಿದಂತೆ ಇತರರು ಇದ್ದರು.

Related posts: