RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬಿ.ಬೊಮ್ಮನಹಳ್ಳಿ

ಗೋಕಾಕ:ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬಿ.ಬೊಮ್ಮನಹಳ್ಳಿ 

ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬಿ.ಬೊಮ್ಮನಹಳ್ಳಿ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 19 :

 

 
ಪ್ರವಾಹದಿಂದ ನಲುಗಿರುವ ಅರ್ಹರಿರುವ ಸಂತ್ರಸ್ಥರನ್ನು ಗುರುತಿ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಹಾಗೂ ಪರಿಹಾರವನ್ನು ನೀಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.
ಸೋಮವಾರದಂದು ಸಮೀಪದ ಲೋಳಸೂರ ಸೇತುವೆಯ ದುರಸ್ತಿ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು ಇತಿಚಿಗೆ ಸುರಿದ ಧಾರಾಕಾರ ಮಳೆಗೆ ಹಾಗೂ ಜಲಾಶಯಗಳಿಂದ ಮಹಾಪೂರ ಬಂದಿದ್ದರಿಂದ ಜಿಲ್ಲೆಯಲ್ಲಿ ಅಫಾರ ಜನ ಜೀವನ ನಾಶವಾಗಿದ್ದು ಸಮರೋಪಾಧಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಅರ್ಹ ಎಲ್ಲ ಸಂತ್ರಸ್ಥರಿಗೂ ಸರಕಾರದಿಂದ ಬಂದ ಪರಿಹಾರವನ್ನು ದೊರಕಿಸಿಕೊಡಲಾಗುವುದೆಂದು ಹೇಳಿದರು.
ತಾಲೂಕಿನ ಶಿಂಗಳಾಪೂರ, ಅಡಿಬಟ್ಟಿ, ಕಲಾರಕೊಪ್ಪ, ಮೆಳವಂಕಿ ಗ್ರಾಮಗಳಿಗೆ ಹಾಗೂ ಗೋಕಾಕ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ಥರನ್ನು ಬೇಟ್ಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ,ವ್ಹಿ.ರಾಜೇಂದ್ರ, ತಾಲೂಕ ಪಂಚಾಯತಿ ಇಒ ಬಸವರಾಜ ಹೆಗ್ಗನಾಯಕ, ತಹಶೀಲ್ದಾರ ಪ್ರಕಾಶ ಹೊಳೆಪ್ಪನವರ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಪಿ.ಆರ್.ಇ.ಡಿ ಕಾರ್ಯನಿರ್ವಾಹಕ ಅಭಿಯಂತರ ಐ.ಎಂ. ದಫೇದಾರ, ತಾ.ಪಂ. ಸಹಾಯಕ ನಿರ್ಧೇಶಕ ಎಸ್.ಎಚ್.ದೇಸಾಯಿ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ ಐಟಂ: ಗೋಕಾಕ ನಗರದಲ್ಲಿ ನಗರ ಸಭೆಯ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ತೆರವು ಸೇರಿದಂತೆ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿಲ್ಲ, ಕುಡಿಯುವ ನೀರನ್ನು ಬಿಡುತ್ತಿಲ. ಕೆಸರು ರಾಡಿಗಳನ್ನು ತೆಗೆಯಲು ಜೆಸಿಬಿ ಮತ್ತು ಟ್ಯಾಕ್ಟರ್‍ಗಳನ್ನು ಬೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ಸಂತ್ರಸ್ತರು ತೋಡಿಕೊಂಡಾಗ ಮೀನಾಮೇಷವನ್ನು ಏಣಿಸದೇ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರಲ್ಲದೇ ತಹಶೀಲದಾರ ಅವರಿಗೆ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಬೇಕೆಂದು ಮೌಖಿಕವಾಗಿ ಆದೇಶವನ್ನು ನೀಡಿದರು.

Related posts: