RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಪ್ರವಾಹದಿಂದ ಹಾನಿಯಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸಲು ಜೆಸಿಐನಿಂದ ಸಭೆ ಆಯೋಜನೆ

ಗೋಕಾಕ:ಪ್ರವಾಹದಿಂದ ಹಾನಿಯಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸಲು ಜೆಸಿಐನಿಂದ ಸಭೆ ಆಯೋಜನೆ 

ಪ್ರವಾಹದಿಂದ ಹಾನಿಯಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸಲು ಜೆಸಿಐನಿಂದ ಸಭೆ ಆಯೋಜನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :

 

 
ಜೆಸಿಐ ಸಂಸ್ಥೆ ಗೋಕಾಕ ಇವರ ನೇತೃತ್ವದಲ್ಲಿ ನಗರದ ರೋಟರಿ ಕ್ಲಬ್ ,ಲೈನ್ಸ್ ಕ್ಲಬ್ , ಕರವೇ (ಸ್ವಾಭಿಮಾನಿ ಬಣ) , ಸರಾಫ್ ವ್ಯಾಪಾರಸ್ಥರ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ಪ್ರವಾಹದಿಂದ ಹಾನಿಗೊಳಗಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸುವ ಸಲುವಾಗಿ ಇಲ್ಲಿಯ ಬೀರೇಶ್ವರ ಸಮುದಾಯ ಭವನದಲ್ಲಿ ಮಂಗಳವಾರದಂದು ಪೂರ್ವಭಾವಿ ಸಭೆ ನಡೆಸಲಾಯಿತು .

ಪ್ರವಾಹದಿಂದ ನಗರದಲ್ಲಿ ವ್ಯಾಪಾರಸ್ಥರು ಹೆಚ್ಚಿನ ಹಾನಿಗೋಳಗಾಗಿದ್ದಾರೆ. ಅವರಿಗೆ ಸರಕಾರ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಸರಕಾರದ ಗಮನ ಸೇಳೆಯಲು ಶನಿವಾರ ಮುಂಜಾನೆ 9 ಘಂಟೆಗೆ ನಗರದ ನಾಕಾ ದಿಂದ ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ ಕಛೇರಿಗೆ ತೆರಳಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು

ಈ ಸಭೆಯಲ್ಲಿ ಮುಖಂಡರುಗಳಾದ ವಿಷ್ಣು ಲಾತೂರ, ಮಹಾವೀರ ಖಾರೇಪಠಾಣ , ಸೋಮಶೇಖರ್ ಮಗದುಮ್ಮ, ವಿಶ್ವನಾಥ ಬೆಲ್ಲದ, ಜಯಾನಂದ ಮುನ್ನೋಳಿ , ಮಹಾಂತೇಶ ತಾವಂಶಿ , ‌ಸುನೀಲ ಷಾ ,ವಿಜಯ ಖಾರೇಪಠಾಣ, ಸಂತೋಷ ಕಂಡ್ರಿ, ಸೇರಿದಂತೆ ಇತರರು ಇದ್ದರು

Related posts: