ಗೋಕಾಕ:ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ
ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :
ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿರುವದನ್ನು ಖಂಡಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಮಂಗಳವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ ನಡೆಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಭಾವಿ ನಾಯಕರಾಗಿ , ಬಡವರ ಬಂದುವಾಗಿ ತಮ್ಮ ಪ್ರಾಮಾಣಿಕ ಸೇವೆಯಿಂದ ಜನಪ್ರಿಯವಾಗಿದ್ದಾರೆ. ಬಿಜೆಪಿ ಪಕ್ಷವನ್ನು ಸಂಘಟಿಸಿ ಬಲಿಷ್ಠ ಗೋಳಿಸುವಲ್ಲಿ ಶಾಸಕ ಬಾಲಚಂದ್ರ ಅವರ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು ಹಿಂತಹ ನಾಯಕರಿಗೆ ಸಚಿವ ಸ್ಥಾನ ತಪ್ಪಿದ್ದು, ಕಾರ್ಯಕರ್ತರಲ್ಲಿ ಆಶ್ಚರ್ಯ ಹಾಗೂ ಆಘಾತಕಾರಿಯಾಗಿದೆ ತಕ್ಷಣ ಸಚಿವ ಸ್ಥಾನ ನೀಡಬೇಕು ಇದು ಸಾಂಕೇತಿಕ ಹೋರಾಟವಾಗಿದ್ದು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಮುಖಂಡರು ಹೇಳಿದರು .
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೋಪ್ಪದ , ಮುಖಂಡರುಗಳಾದ ಪ್ರಕಾಶ ಮಾದರ,ಲಕ್ಷ್ಮಣ ಮುಸಗುಪ್ಪಿ, ಶಿವಲಿಂಗ ಬಳಿಗಾರ,ಶಿವು ಲೋಕನ್ನವರ,ಅಡಿವೆಪ್ಪ ಕನ್ನಕಾಳೆ ಸೇರಿದಂತೆ ಅನೇಕರು ಇದ್ದರು