RNI NO. KARKAN/2006/27779|Saturday, December 14, 2024
You are here: Home » breaking news » ಘಟಪ್ರಭಾ:ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

ಘಟಪ್ರಭಾ:ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ 

ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

 

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಅ 20 :

 

 
ಸಮೀಪದ ಬಡಿಗವಾಡ ಗ್ರಾಮದಲ್ಲಿ ದಿ.ದುಂಡಪ್ಪ ಚೌಕಶಿ ಅವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಗೋಕಾಕ ರೋಟರಿ ಕ್ಲಬ್ ರಕ್ತ ಭಂಡಾರ ಕೇಂದ್ರ ಅವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ರಕ್ತ ಭಂಡಾರ ಕೇಂದ್ರದ ಮುಖ್ಯಸ್ಥ ವಿನೋದ ಸುಪ್ಲಿ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಟವಾಗಿದೆ. ಈಗ ನಾವು ಕೊಟ್ಟಿರುವ ರಕ್ತದಿಂದ ಜೀವನ ಮರಣದ ನಡುವೆ ಹೋರಾಡುತ್ತಿರುವ ಜನರಿಗೆ ಸಹಾಯವಾಗುತ್ತದೆ. ರಕ್ತದಾನ ಮಾಡುವ ಮೂಲಕ ಚೌಕಶಿ ಕುಟುಂಬದವರು ತಮ್ಮ ಹಿರಿಯರನ್ನು ಸ್ಮರಣಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ 30 ಕ್ಕೂ ಹೆಚ್ಚು ಜನರು ತಮ್ಮ ರಕ್ತವನ್ನು ದಾನಮಾಡಿದರು. ಈ ಸಂದರ್ಭದಲ್ಲಿ ಕಲ್ಲಪ್ಪ ಚೌಕಶಿ, ಪರಶುರಾಮ ಚೌಕಶಿ, ಶಂಕರ್ ಚೌಕಶಿ, ಯಲ್ಲಾಲಿಂಗ ಚೌಕಶಿ, ಶಿವಾನಂದ ಚೌಕಶಿ, ನಾಗರಾಜ ಚೌಕಶಿ, ಕಲ್ಲಪ್ಪ ಶಿರೋಳ, ವೆಂಕಣ್ಣ ತುಳಸಿಗೇರಿ, ಕಾಡಪ್ಪ ವಗ್ಗನವರ, ಭರಮಪ್ಪ ಡಬಾಜ, ವಿಠ್ಠಲ ಸಂಪಗಾರ ಸೇರಿದಂತೆ ಅನೇಕರು ಇದ್ದರು.

Related posts: