ಗೋಕಾಕ:ನೆರೆ ಹಾವಳಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಪರಿಹಾರ ಕಾರ್ಯ ಕೈಗೋಳುತ್ತಿದೆ : ಸಚಿವ ಲಕ್ಷ್ಮಣ ಸವದಿ
ನೆರೆ ಹಾವಳಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಪರಿಹಾರ ಕಾರ್ಯ ಕೈಗೋಳುತ್ತಿದೆ : ಸಚಿವ ಲಕ್ಷ್ಮಣ ಸವದಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 22 :
ರಾಜ್ಯದಲ್ಲಿ ನೆರೆ ಹಾವಳಿಯಿಂದಾಗ ದೊಡ್ಡ ಪ್ರಮಾಣದ ಹಾನಿಯನ್ನು ಸರಕಾರ ಸವಾಲಾಗಿ ಸ್ವೀಕರಿಸಿ ಸಮೊರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೋಳುತ್ತಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಗುರುವಾರದಂದು ನಗರದ ನೆರೆ ಹಾವಳಿಗೆ ಒಳಗಾದ ಪ್ರದೇಶಗಳನ್ನು ವಿಕ್ಷೀಸಿ ತಾ.ಪಂ ಸಭಾಂಗಣದಲ್ಲಿ ನಡೆಸಲಾದ ಅಧಿಕಾರಿಗಳ ಹಾಗೂ ಸಂತ್ರಸ್ತರ ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂತ್ರಸ್ತರು ಎದೆಗುಂದದೆ ಧೈರ್ಯವಾಗಿರಿ ನಿಮ್ಮೊಂದಿಗೆ ಸರಕಾರ ಇದ್ದು ನಿಮ್ಮ ಬದುಕನ್ನು ಕಟ್ಟಿಕೊಡಲು ಬದ್ದವಾಗಿದೆ.ಈಗಾಗಲೇ ತುರ್ತು ಪರಿಹಾರ ನೀಡಲಾಗುತ್ತಿದೆ ಎಲ್ಲ ಪ್ರದೇಶಗಳಲ್ಲಾದ ಹಾನಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೋಳ್ಳಲಾಗುವದು.
ಪರಿಹಾರ ನೀಡುವಲ್ಲಿ ಮನೆ ಮಾಲೀಕರು,ಬಾಡಿಗೆ ದಾರರು ,ವ್ಯಾಪಾರಸ್ಥರು, ಜಾನುವಾರುಗಳು,ಬೆಳೆಹಾನಿ ಇವುಗಳನ್ನು ಪರಿಗಣಿಸಲಾಗುವದು. ಅಧಿಕಾರಿಗಳು ಸೇವಾ ಮನೋಭಾವದಿಂದ ನಿಕ್ಷಪಕ್ಷಪಾತವಾದ ಸರ್ವೆ ನಡೆಯಿಸಿ ಸಂತ್ರಸ್ತರನ್ನು ಗುರಿತಿಸುವಂತೆ ಸೂಚಿಸಿದರು.
ಈ ಒಂದು ಪರಿಹಾರ ಕಾರ್ಯದಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಸಹಕಾರ ನೀಡಬೇಕೆಂದು ಕೋರಿದ ಅವರು ಹಾನಿಗೆ ಒಳಗಾದ ಪ್ರದೇಶಗಳ ರಸ್ತೆ,ಸ್ವಚ್ಛತೆ, ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಲಭ್ಯ, ವಿದ್ಯುತ್ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವಂತೆ ಆದೇಶಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಾನಿಗೆ ಒಳಗಾದ ಸಂತ್ರಸ್ತರ ಹಾಗೂ ಗ್ರಾಮಸ್ಥರ ಗ್ರಾಮ ಸಭೆಗಳನ್ನು ನಡೆಯಿಸಿ ಅವರ ಪುನರ್ವಸತಿಗೆ ಬಗ್ಗೆ ಅವರ ಸಲಹೆ ಸೂಚನೆಗಳನ್ನು ಪಡೆದು ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಜಿ.ಪಂ ಸಿಇಒ ಕೆ.ವಿ.ರಾಜೇಂದ್ರ ಅವರಿಗೆ ಸೂಚಿಸಿದರು
ಸಕ್ಕರೆ ಕಾರಖಾನೆಯ ಮಾಲೀಕರೊಂದಿಗೆ ಸಭೆ ನಡೆಯಿಸಿ ಹಾನಿಗೆ ಒಳಗಾದ ಕಬ್ಬು ಬೆಳೆಗಾರರಿಗೆ ಪರಿಹಾರ ಕೊಂಡುಕೋಳ್ಳಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ತುರ್ತು ಪರಿಸ್ಥಿತಿ ಇದ್ದಂತಾಗಿದೆ ಎಲ್ಲ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ನಿವುಗಳು ಇಲ್ಲಿಂದ ವರ್ಗವಾಗಿ ಹೋದರು ಸಹ ನಿಮ್ಮನ್ನು ಇಲ್ಲಿಯ ಜನರು ನೆನೆಸುವ ಹಾಗೆ ನೆರೆ ಸಂತ್ರಸ್ತರಿಗೆ ಸಕಲ ಸಹಾಯ ಸಹಕಾರವನ್ನು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು
ಇದೇ ಸಂದರ್ಭದಲ್ಲಿ ನೆರೆ ಪ್ರವಾಹದಿಂದ ನಿರಾಶ್ರಿತರಾದ ಸಂತ್ರಸ್ತರಿಗೆ ಸರಕಾರದಿಂದ ದಿನಬಳಕೆಯ ವಸ್ತುಗಳ ಕಿಟ್ಟನ್ನು ಸಚಿವ ಸವದಿ ವಿತರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ , ಜಿಲ್ಲಾಧಿಕಾರಿ ಎಸ್.ಬಿ.ಬೋಮನಳ್ಳಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ರಾಜೇಂದ್ರ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಇದ್ದರು .