RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ತಕ್ಷಣ ಪುನರ್ವಸತಿ ಕಲ್ಪಿಸಿಕೋಡವಂತೆ ಆಗ್ರಹಿಸಿ ಸಂತ್ರಸ್ತರ ಪ್ರತಿಭಟನೆ

ಗೋಕಾಕ:ತಕ್ಷಣ ಪುನರ್ವಸತಿ ಕಲ್ಪಿಸಿಕೋಡವಂತೆ ಆಗ್ರಹಿಸಿ ಸಂತ್ರಸ್ತರ ಪ್ರತಿಭಟನೆ 

ತಕ್ಷಣ ಪುನರ್ವಸತಿ ಕಲ್ಪಿಸಿಕೋಡವಂತೆ ಆಗ್ರಹಿಸಿ ಸಂತ್ರಸ್ತರ ಪ್ರತಿಭಟನೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 24 :

 

 

ನೆರೆ ಹಾವಳಿಯಿಂದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರು ತಕ್ಷಣ ನಮಗೆ ಪುನರ್ವಸತಿ ಕಲ್ಪಿಸಿಕೋಡಬೇಕೆಂದು ಆಗ್ರಹಿಸಿ ಶನಿವಾರದಂದು ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಯಿಸಿದರು .

ನಂತರ ತಹಶೀಲ್ದಾರ ಕಛೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಪರಿಹಾರ ಕೇಂದ್ರದಲ್ಲಿ ತಮಗಾಗುತ್ತಿರುವ ತೊಂದರೆಗಳನ್ನು ತಿಳಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಹಸೀಲ್ದಾರಿಗೆ ಆಗ್ರಹಿಸಿದರು. ತಮ್ಮಿಂದ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ತೊಂದರೆ ಯಾಗುತ್ತಿದ್ದು , ಇದಕ್ಕೆ ಅಧಿಕಾರಿಗಳು ತಕ್ಷಣದಲ್ಲಿ ಸ್ವಂದಿಸುವಂತೆ ಒತ್ತಾಯಿಸಿದರು . ಇವರ ಮನವಿಗೆ ಸ್ವಂದಿಸಿದ ತಹಶೀಲ್ದಾರ ಎರೆಡು ದಿನದಲ್ಲಿ ಸಂತ್ರಸ್ತರಿಗೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗುವದು ಮತ್ತು ಎಲ್ಲ ಪರಿಹಾರ ಕೇಂದ್ರದ ಶಾಲಾ ಕಾಲೇಜುಗಳು ಸೋಮವಾರದಿಂದ ಪ್ರಾರಂಭಿಸಲಾಗುದು ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.

ಇದೇ ಸಂದರ್ಭದಲ್ಲಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿರುವ ಸಂತ್ರಸ್ತರರನ್ನು ಅಲ್ಲಿಯ ಪ್ರಾಚಾರ್ಯ ಹಾದಿಮನಿ ಸರಿಯಾಗಿ ನೋಡುಕೋಳ್ಳುತ್ತಿಲ್ಲವೆಂದು ಆರೋಪಿಸಿದ ನೆರೆ ಸಂತ್ರಸ್ತರು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸದ ಘಟನೆ ನಡೆಯಿತು

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ದಯಾನಂದ ಮಾವರಕರ, ಪ್ರತಾಫ ಕದಮ,ಮಹೆಬೂಬ ಬೋಜಗಾರ, ಆನಂದ ಕರನಿಂಗಪ್ಪಗೋಳ, ಚಂದ್ರಕಾಂತ ಓಟಕರ,ಪ್ರದಿಪ ಮಾವರಕರ , ಕೃಷ್ಣಾ ಖಾನಪ್ಪನವರ ಸೇರಿದಂತೆ ಇತರರು ಇದ್ದರು

Related posts: