ಗೋಕಾಕ:ಕಾಟಾಚಾರಕ್ಕೆ ಎಂಬಂತೆ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲನೆ ನಡೆಯಿಸಿ ತೆರಳಿದ ಕೇಂದ್ರ ತಂಡ
ಕಾಟಾಚಾರಕ್ಕೆ ಎಂಬಂತೆ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲನೆ ನಡೆಯಿಸಿ ತೆರಳಿದ ಕೇಂದ್ರ ತಂಡ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 25 :
ನೆರೆ ಹಾವಳಿಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೇಂದ್ರದ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ಅವರ ನೇತೃತ್ವದ ನೆರೆ ಪರಿಹಾರ ತಂಡ ಗೋಕಾಕ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಯಿಸಿದರು .
ರವಿವಾರದಂದು ನಗರದ ಲೋಳಸೂರ ಸೇತುವೆ , ಕುಂಬಾರ ಗಲ್ಲಿಯ ಬಿದ್ದ ಮನೆಗಳು ಹಾಗೂ ಎಪಿಎಂಸಿಯಲ್ಲಿಯ ಗಂಜಿ ಕೇಂದ್ರ ಮತ್ತು ಗೋ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಹಂತದ ಪರಿಶಿಲನೆ ನಡೆಸಿದ್ದು ಮತ್ತೊಂದು ಬಾರಿ ಪರಿಶೀಲನೆ ನಡೆಯಿಸಿ ಸಮಗ್ರ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ಅವರ ತಿಳಿಸಿದರು
ನಗರದಲ್ಲಿ ನೆರೆ ಹಾವಳಿಯಿಂದ ಸಾವಿರಾರು ಕೋಟಿ ಹಾನಿ ಒಳಗಾದ ಪ್ರದೇಶಗಳನ್ನು ಕೇಂದ್ರ ತಂಡವು ಕೇವಲ 15 ನಿಮಿಷಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಪರಿಶೀಲಿಸಿ ತೆರಳಿದ್ದು ಸಂತ್ರಸ್ತರಲ್ಲಿ ಆತಂಕ ಮೂಡಿಸಿದೆ
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೋಮ್ಮನಳಿ, ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ , ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಬಿ.ರಾಜೇಂದ್ರ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಇತರ ಆಧಿಕಾಗಳು ಇದ್ದರು .