ಗೋಕಾಕ:ಸಂತ್ರಸ್ತರ ಕಷ್ಷಗಳಲ್ಲಿ ಪಾಲ್ಗೋಳ ಬೇಕಾದವರು ದೆಹಲಿಯಲಿದ್ದು ಅಧಿಕಾರಕ್ಕಾಗಿ ಲಾಬಿ ನಡೆಸುತ್ತಿದ್ದಾರೆ : ಮಾಜಿ ಸಚಿವ ಸತೀಶ
ಸಂತ್ರಸ್ತರ ಕಷ್ಷಗಳಲ್ಲಿ ಪಾಲ್ಗೋಳ ಬೇಕಾದವರು ದೆಹಲಿಯಲಿದ್ದು ಅಧಿಕಾರಕ್ಕಾಗಿ ಲಾಬಿ ನಡೆಸುತ್ತಿದ್ದಾರೆ : ಮಾಜಿ ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 25 :
ನೆರೆ ಸಂತ್ರಸ್ಥರ ಕಷ್ಷಗಳಲ್ಲಿ ಪಾಲ್ಗೋಳ ಬೇಕಾದವರು ದೆಹಲಿಯಲಿದ್ದು ಅಧಿಕಾರಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಸಚಿವ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಸಹೋದರ ರಮೇಶ ಜಾರಕಿಹೊಳಿ ಅವರ ನಡೆಯನ್ನು ಟೀಕಿಸಿದರು
ರವಿವಾರದಂದು ನಗರದ ಗುರುವಾರ ಪೇಠೆಯ ಲಕ್ಷ್ಮೀ ದೇವಿ ದೇವಸ್ಥಾನ ಆವರಣದಲ್ಲಿ ಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡಿದರು
ನೆರೆ ಪೀಡಿತ ಜನರಿಗೆ ಅನುಕೂಲವಾಗಲು ಸತೀಶ ಶುಗರ್ಸ ಕಾರಖಾನೆ ಮತ್ತು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಗರದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಿದ್ದನ್ನು ಕೆಲವರು ರಾಜಕೀಯಕ್ಕಾಗಿ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಟಿಕಿಸುತ್ತಿದ್ದಾರೆ. ಆದರೆ ನಮ್ಮ ಕಾರ್ಯ ನೊಂದವರ ಪರವಾಗಿದ್ದು , ಯಾವದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದ ಸತೀಶ ಜಾರಕಿಹೊಳಿ ಅವರು ನಗರಸಭೆಯವರು ಮೊದಲೇ ಸ್ವಚ್ಚತಾ ಕಾರ್ಯ ಕೈಗೋಳಬೇಕಾಗಿತ್ತು ಆದರೆ ನಾವು ಸ್ವಚ್ಚತಾ ಕಾರ್ಯ ಪ್ರಾರಂಭಿಸಿದ ನಂತರ ಅವರು ತಮ್ಮ ಕಾರ್ಯವನ್ನು ಮಾಡಿದರು . ನಮ್ಮ ಈ ಸ್ವಚ್ಚತಾ ಕಾರ್ಯ ಇನ್ನೂ ಮುಂದುವರೆಯಲ್ಲಿದ್ದು , ಆಗಸ್ಟ 30 ವರೆಗೆ ನಡೆಯಲಿದೆ ಅಷ್ಟರೊಳಗೆ ಸಾರ್ವಜನಿಕರು ತಮ್ಮ ಬಿದ್ದ ಮನೆಗಳ ಮಣ್ಣುನ್ನು ತೆರೆವುಗೋಳಿಸಿಕೊಳ್ಳಬೇಕು ಎಂದು ಸತೀಶ ಜಾರಕಿಹೊಳಿ ತಿಳಿಸಿದರು
ಲೋಳಸೂರ ಸೇತುವೆಗಾಗಿ ಹೋರಾಟ : ಲೋಳಸೂರ ಸೇತುವೆ ಪಕ್ಕದ ರಸ್ತೆ ಎತ್ತರಿಸಿದನ್ನು ಖಂಡಿಸಿ ಕಳೆದ 13 ವರ್ಷಗಳ ಹಿಂದೆ ನಾವು ಹೋರಾಟ ಕೈಗೊಂಡರು ಕೆಲವರು ಅದನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ರಸ್ತೆ ಎತ್ತರಿಸಿ ಅಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ ಅದರ ಪರಿಣಾಮವಾಗಿ ಇಂದು ನಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ನುಗ್ಗಿದೆ. ಈ ನಮ್ಮ ಹೋರಾಟ ಮುಂದುವರೆಯಲ್ಲಿದು , ಸಾರ್ವಜನಿಕರು ಇದಕ್ಕೆ ಕೈ ಜೋಡಿಸಬೇಕು ಎಂದು ಶಾಸಕ ಸತೀಶ ಮನವಿ ಮಾಡಿದರು
ಈ ಸಂದರ್ಭದಲ್ಲಿ ಬಸವರಾಜ ಸಾಯನ್ನವರ, ಶಿವು ಪಾಟೀಲ, ರಿಯಾ ಚೌಗಲಾ, ಭಗವಂತ ಹುಳ್ಳಿ, ವಿವೇಕ ಜತ್ತಿ, ವಿಜಯ ಜತ್ತಿ ಸೇರಿದಂತೆ ಅನೇಕರು ಇದ್ದರು