ಗೋಕಾಕ:ನೆರೆ ನಿಂತರೂ ರಕ್ಷಣಾ ಕಾರ್ಯವನ್ನು ಮುಂದುವರೆಸಿದ ಅಯ್ಯುಬ ಖಾನ
ನೆರೆ ನಿಂತರೂ ರಕ್ಷಣಾ ಕಾರ್ಯವನ್ನು ಮುಂದುವರೆಸಿದ ಅಯ್ಯುಬ ಖಾನ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 25 :
ನೆರೆ ಹಾವಳಿ ಮುಗಿದರೂ ರಕ್ಷಣಾ ಕಾರ್ಯವನ್ನು ಮುಂದುವರೆಸಿದ ಎಕ್ಸಪ್ಲೋರ್ ದಿ ಔಡ್ಡೋರ ತಂಡದ ಮುಖ್ಯಸ್ಥ ಅಯ್ಯುಬ ಖಾನ ಅವರು ಮೂರ್ಛೆ ರೋಗ ಪೀಡಿತ ವ್ಯಕ್ತಿಯೊರ್ವನನ್ನು ರಕ್ಷಿಸಿದ ಘಟನೆ ರವಿವಾರದಂದು ಜರುಗಿದೆ.
ಸಮೀಪದ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನದ ಹತ್ತಿರವಿರುವ ಮಾರ್ಕಂಡೇಯ ನದಿಯ ಆಚೆಯ ಜಮೀನೊಂದರಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಯಲ್ಲಪ್ಪ ನಾಗಪ್ಪ ಗುಡ್ಡಕಾರ(42) ಎಂಬ ವ್ಯಕ್ತಿಗೆ ಮೂರ್ಛೆ ಬಂದು ಅಲ್ಲಿಯೇ ಬಿದ್ದಾಗ ಅಲ್ಲಿಯೇ ಇದ್ದವರು 108 ನಂಬರ ಕರೆ ಮಾಡಿದಾಗ ಅವರಿಗೆ ಅಲ್ಲಿಗೇ ಹೋಗಲು ದಾರಿ ಇಲ್ಲದ ಕಾರಣ ಅಯ್ಯುಬ ಖಾನ ಅವರಿಗೆ ಕರೆ ಮಾಡಿದಾಗ ತಕ್ಷಣವೇ ಸ್ಥಳಕ್ಕೆ ಬೋಟಿನೊಂದಿಗೆ ಧಾವಿಸಿ ಬಂದ ಖಾನ ಅವರು ಬೋಟಿನೊಂದಿಗೆ ತೆರಳಿ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು 108 ಸಿಬ್ಬಂದಿಯ ಸಹಾಯದೊಂದಿಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಯ್ಯುಬ ಖಾನ ಅವರ ಕಾರ್ಯ ನೆರೆ ಹಾವಳಿ ನಿಂತರೂ ಕೂಡಾ ರಕ್ಷಣೆ ಕಾರ್ಯದಲ್ಲಿ ವಿಳಂಬ ಮಾಡದೇ ಸಮಯಪ್ರಜ್ಞೆಯನ್ನು ಮೆರೆಯುತ್ತಿರುವ ಕಾರ್ಯವನ್ನು ಇಲ್ಲಿಯ ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.