RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಜಾಗೃತಿ ಮೂಡಿಸುವ ಕಾರ್ಯ ಮಾಡಿ ಆರೋಗ್ಯ ಇಲಾಖೆಯ ಋಣ ತೀರಿಸಿದ ಶಿಕ್ಷಕ ಈರಣ್ಣಾ ಕಡಕೋಳ

ಘಟಪ್ರಭಾ:ಜಾಗೃತಿ ಮೂಡಿಸುವ ಕಾರ್ಯ ಮಾಡಿ ಆರೋಗ್ಯ ಇಲಾಖೆಯ ಋಣ ತೀರಿಸಿದ ಶಿಕ್ಷಕ ಈರಣ್ಣಾ ಕಡಕೋಳ 

ಜಾಗೃತಿ ಮೂಡಿಸುವ ಕಾರ್ಯ ಮಾಡಿ ಆರೋಗ್ಯ ಇಲಾಖೆಯ ಋಣ ತೀರಿಸಿದ ಶಿಕ್ಷಕ ಈರಣ್ಣಾ ಕಡಕೋಳ

 

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಅ 26 :

 

 
ಜಿಲ್ಲೆಯಲ್ಲಿ ಉಂಟಾದ ಅತೀವೃಷ್ಟಿ ಸಮಯದಲ್ಲಿ 108 ಆರೋಗ್ಯ ಕವಚ ಜನರಿಗೆ ಸಹಕಾರಿಯಾಗಿದ್ದು ಇದರ ಕೃತಜ್ಞತಾ ಪೂರ್ವಕವಾಗಿ ಸರ್ಕಾರಿ ಶಾಲೆವೊಂದು ತಮ್ಮ ಶಾಲೆಯ ಮುಖ್ಯ ಗೋಡೆಯ ಮೇಲೆ ಆರೋಗ್ಯ ಇಲಾಖೆಯ ಮಹತ್ವ ಕಾಂಕ್ಷಿ ಯೋಜನೆಯ ಆರೋಗ್ಯ ಕವಚ 108 ವಾಹನದ ಚಿತ್ರವನ್ನು ಚಿತ್ರಿಸಿ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಸಿದ್ಧಾರೂಢ ಮಠದ ಸ.ಹಿ.ಪ್ರಾ ಶಾಲೆಯವರು ಈ ಜಾಗೃತಿ ಕಾರ್ಯವನ್ನು ಕೈಗೊಂಡಿದ್ದು, 108 ವಾಹನದ ಚಿತ್ರವನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.
ಆದರೆ ಈ ಶಾಲೆಯು 15 ದಿನಗಳ ಹಿಂದೆ ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಪೂರ್ಣ ಮುಳುಗಿ ಹೋಗಿತ್ತು. ಶಾಲೆಯಲ್ಲಿನ ಆಟೋಪಕರಣ ಮತ್ತು ಪೀಠೋಪಕರಣಗಳು ಸಂಪೂರ್ಣವಾಗಿ ಹಾಳಾಗಿ ಶಾಲೆಯಲ್ಲಿ ಅಪಾರ ಪ್ರಮಾಣದಲ್ಲಿ ಕೆಸರು ತುಂಬಿಕೊಂಡಿತ್ತು.
ಪ್ರವಾಹ ಇಳಿದ ನಂತರ ಶಾಲೆಯ ಸಹ ಶಿಕ್ಷಕ ಈರಣ್ಣಾ ಕಡಕೋಳ ಅವರು ತಮ್ಮ ಸಹ ಶಿಕ್ಷಕರ ಮತ್ತು ಗ್ರಾಮಸ್ಥರ ಸಹಾಯದಿಂದ 15 ದಿನಗಳ ಒಳಗಾಗಿ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಶಾಲೆಗೆ ಮರು ಜೀವ ನೀಡಿದ್ದಾರೆ ಎಂದು ಶಾಲೆಯ ಮುಖ್ಯೋಪಾದ್ಯಾಯ ಆಯ್.ಪಿ.ಸಜ್ಜನ ತಿಳಿಸಿದರು.
ಶಾಲೆಯವರು ಸರ್ಕಾರಿ ಯೋಜನೆಯ ಜಾಗೃತಿ ಮೂಡಿಸುವ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸಾರ್ವಜನಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಪ್ರವಾಹದಲ್ಲಿ ಸಿಲುಕಿ ಹಾಳಾಗಿದ್ದ ಶಾಲೆಯನ್ನು 15 ದಿನಗಳಲ್ಲಿ ಮತ್ತೆ ಪ್ರಾರಂಬಿಸಿ ಅದರ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ ಶಿಕ್ಷಕ ಈರಣ್ಣಾ ಕಡಕೋಳ ಹಾಗೂ ಶಾಲೆ ಶಿಕ್ಷಕರ ಹಾಗೂ ಗ್ರಾಮಸ್ಥರ ಕಾರ್ಯ ಶ್ಲಾಘನೀಯವಾಗಿದೆ.
ಅಜೀತ ಮನ್ನಿಕೇರಿ,ಬಿ.ಇ.ಓ ಮೂಡಲಗಿ

Related posts: