ಗೋಕಾಕ:ವಿಜೃಂಭನೆಯಿಂದ ನಡೆದ ಅರಣ್ಯಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ
ವಿಜೃಂಭನೆಯಿಂದ ನಡೆದ ಅರಣ್ಯಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಸುದ್ದಿ, ಬೆಟಗೇರಿ ಅ 26 :
ಗ್ರಾಮದ ಬಸವ ನಗರದಲ್ಲಿರುವ ಶ್ರೀ ಅರಣ್ಯಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಗಸ್ಟ 24, 25 ರಂದು ವಿಜೃಂಭನೆಯಿಂದ ನಡೆದವು.
ಶನಿವಾರ ಆ. 24 ರಂದು ಶ್ರೀ ಅರಣ್ಯಸಿದ್ಧೇಶ್ವರ ದೇವರ ಗದ್ದುಗೆಗೆ ಸಂಜೆ 8 ಗಂಟೆಗೆ ಮಹಾಪೂಜೆ ನಡೆದು, ರಾತ್ರಿ ಶಿವಜಾಗರಣೆ, ಡೊಳ್ಳಿನ ಹಾಡು ಹಾಡುವ ಕಾರ್ಯಕ್ರಮ ಭಕ್ತಿ, ಭಾವದಿಂದ ನಡೆದು, ರವಿವಾರ ಆ.25 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಅರಣ್ಯಸಿದ್ಧೇಶ್ವರ ದೇವರ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ ವೈಭವದಿಂದ ಜರುಗಿ, ವಿವಿಧ ಪುರದೇವರ ಪಲ್ಲಕ್ಕಿಗಳ ಬರಮಾಡಿಕೊಳ್ಳುವದು, ಉತ್ಸವ ಜರುಗಿ ನಂತರ ಪುರಜನರಿಂದ ನೈವೇದ್ಯ ಅರ್ಪಿಸುವ, ಮತ್ತು ಪೂಜೆ, ಪುನಸ್ಕಾರ,ಭಂಡಾರ ಹಾರಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಜರುಗಿದ ನಂತರ ಮಹಾಪ್ರಸಾದ ನಡೆದು, ಭಂಡಾರ ಒಡೆಯುವ ಕಾರ್ಯಕ್ರಮ ಜರುಗಿ, ಜಾತ್ರಾ ಮಹೋತ್ಸವ ಸಮಾರೂಪಗೊಂಡಿತು.
ಗ್ರಾಮದ ಹಿರಿಯರಾದ ಕೆಂಚಪ್ಪ ವಡೇರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಬಸಪ್ಪ ವಡೇರ, ಹನುಮಂತ ವಡೇರ, ಶಂಕರ ಕೋಣಿ, ಮಾರುತಿ ಚಂದರಗಿ, ಬಸವರಾಜ ಕುರಬೇಟ, ಮಹಾದೇವ ಹೊರಟ್ಟಿ, ಬಸವಲಿಂಗ ಹಾದಿಮನಿ, ರಮೇಶ ಹಾಲನ್ನವರ, ವಿಠಲ ಕೋಣಿ, ವಿಠಲ ಚಂದರಗಿ, ನೀಲಪ್ಪ ಪಾರ್ವತೇರ ಸ್ಥಳೀಯ ಬಸವ ನಗರದಲ್ಲಿರುವ ಶ್ರೀ ಅರಣ್ಯಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಸದಸ್ಯರು, ಸ್ಥಳೀಯ ಭಕ್ತರು, ಗ್ರಾಮಸ್ಥರು ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.