RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನೆರೆ ಹಾವಳಿಗೆ ಒಳಗಾದ ಸ್ಥಳೀಯ ಕೆಎಲ್‍ಇ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ದಿನಬಳಿಕೆ ವಸ್ತುಗಳ ವಿತರಣೆ

ಗೋಕಾಕ:ನೆರೆ ಹಾವಳಿಗೆ ಒಳಗಾದ ಸ್ಥಳೀಯ ಕೆಎಲ್‍ಇ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ದಿನಬಳಿಕೆ ವಸ್ತುಗಳ ವಿತರಣೆ 

ನೆರೆ ಹಾವಳಿಗೆ ಒಳಗಾದ ಸ್ಥಳೀಯ ಕೆಎಲ್‍ಇ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ದಿನಬಳಿಕೆ ವಸ್ತುಗಳ ವಿತರಣೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 27 :

 

 
ನೆರೆ ಹಾವಳಿಯಿಂದ ಹಾನಿಗೊಳಗಾದ ಸ್ಥಳೀಯ ಕೆಎಲ್‍ಇ ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ 10ಲಕ್ಷ ರೂಗಳ ದಿನಬಳಿಕೆ ವಸ್ತುಗಳನ್ನು ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿಯವರು ಮಂಗಳವಾರದಂದು ನಗರದಲ್ಲಿ ವಿತರಿಸಿದರು.
ಕೆಎಲ್‍ಇ ಸಂಸ್ಥೆ ಹಾಗೂ ಕೆಎಲ್‍ಇ ಇಂಟರನ್ಯಾಶನಲ್ ಸ್ಕೂಲ್ ಬೆಳಗಾವಿ ಮತ್ತು ಕೆಎಲ್‍ಇ ಶಾಲೆಗಳಾದ ಬೆಂಗಳೂರಿನ ನಾರಭಾವಿ, ರಾಜಾಜಿನಗರ, ನಗರದ ಮಹಾದೇವಪ್ಪ ಮುನವಳ್ಳಿ ಶಾಲೆ ಮತ್ತು ಬೆಂಗಳೂರಿನ ಅಲ್ವಾನ್ ಟೇಕ್ನಾಲಜಿ ಮತ್ತು ಸಿಯಾನ್ನಾ ಇಕ್ಯಾಡ್ ಕಂಪನಿ ಇವರಿಂದ ಈ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು.
ಈ ಸಂದರ್ಭದಲ್ಲಿ ಸ್ಥಳೀಯ ಕೆಎಲ್‍ಇ ಸಂಸ್ಥೆಯ ಆಡಳಿತಾಧಿಕಾರಿ ಜಿ ಎಮ್ ಅಂದಾನಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಅನುಪಾ ಕೌಶಿಕ, ಪದ್ಮಭೂಷನ ಪಾಟೀಲ, ಎಮ್ ಎ ಪಾಟೀಲ, ಆನಂದ, ಜಿ ಎಸ್ ಚಂದ್ರಶೇಖರ, ಕಂಪಣಿಯ ಆಕಾಶ ಪಾಟೀಲ, ಕಿರಣ ಕರೆಮಡಿ, ಸಂತೋಷ ಬೆನಗಿ ಇದ್ದರು.

Related posts: