ಬೆಳಗಾವಿ:ಅಕ್ರಮ ಮತದಾನ ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ
ಅಕ್ರಮ ಮತದಾನ ತಡೆಗಟ್ಟುವಂತೆ ಆಗ್ರಹ : ಬಿಜೆಪಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ
ಬೆಳಗಾವಿ ಜು 20: ಹಣ ಮತ್ತು ಭುಜಬಲದ ಮೇಲೆ ನಡೆಯುತ್ತಿರುವ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿತು. ಬೆಳಗಾವಿ ಜಿಲ್ಲಾ ಮತದಾರರ ವೇದಿಕೆ ಬ್ಯಾನರ್ ಅಡಿ ಈ ಧರಣಿ ಸತ್ಯಾಗ್ರಹ ನಡೆಯಿತು. ಶಶಿಕಾಂತ ನಾಯಕ, ಈರಣ್ಣ ಕಡಾಡಿ, ಅಶೋಕ ಪೂಜಾರಿ, ಭೀಮಪ್ಪ ಗಡಾದ, ಅನಿಲ ಬೆನಕೆ ಸೇರಿದಂತೆ ಇತರ ನಾಯಕರು ನೇತೃತ್ವ ವಹಿಸಿದರು.
ಕಡ್ಡಾಯವಾಗಿ ಮತದಾರರನ್ನು ಆಧಾರ ಕಾರ್ಡನೊಂದಿಗೆ ಸಂಯೋಜನೆಗಿಳಿಸಬೇಕು ಎಂಬ ಮುಖ್ಯ ಬೇಡಿಕೆ ಇಟ್ಟರು.
ಜತೆಗೆ ಮಳೆ ಕೊರತೆಯಿಂದ ಜನ ಅನುಭವಿಸುತ್ತಿರುವ ನೀರಿನ ಕೊರತೆ ನೀಗಿಸಲು ತಕ್ಷಣ ಹಿಡಕಲ್ ಮತ್ತು ಧೂಪದಾಳ ಜಲಾಶಯಗಳಿಂದ ರಾಯಬಾಗ, ಕುಡಚಿ, ಗೋಕಾಕ, ಹುಕ್ಕೇರಿ ತಾಲೂಕುಗಳಿಗೆ ನೀರು ಬಿಡಬೇಕೆಂದು ಆಗ್ರಹಿಸಿದರು. ಅಕ್ರಮ ಮತದಾನ ತಪ್ಪಿಸಲು ಆಧಾರ ಸಂಯೋಜನೆ ಉತ್ತಮ ಕ್ರಮ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು