ಗೋಕಾಕ:ಪರಿಹಾರ ಕೊಡಿಸಲು ಸಿ.ಎಂ ಯಡಿಯೂರಪ್ಪ ಕಿವಿ ಹಿಂಡಿ ಕೇಳುತ್ತೆವೆ : ಮಾಜಿ ಸಿ.ಎಂ ಸಿದ್ದರಾಮಯ್ಯ
ಪರಿಹಾರ ಕೊಡಿಸಲು ಸಿ.ಎಂ ಯಡಿಯೂರಪ್ಪ ಕಿವಿ ಹಿಂಡಿ ಕೇಳುತ್ತೆವೆ : ಮಾಜಿ ಸಿ.ಎಂ ಸಿದ್ದರಾಮಯ್ಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 28 :
ಮೆಳವಂಕಿ ಸೇರಿ ಹಲವು ಗ್ರಾಮಗಳು ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾದ ಗ್ರಾಮಗಳಾಗಿದ್ದು ವಾಸ್ತವ್ಯ ಮಾಡಲು ಯೋಗ್ಯವಲ್ಲ, ಮತ್ತೆ ಯಾವಾಗದರೂ ಪ್ರವಾಹ ಬರಬಹುದು, ಮತ್ತೆ ಊರು ಮುಳುಗಡೆಯಾಗುತ್ತೆ, ಇಂತಹ ಊರುಗಳನ್ನ ಸಂಪೂರ್ಣವಾಗಿ ಸ್ಥಳಾಂತರ ಮಾಡಲೆಬೇಕು ಎಂದು ಮಾಜಿ ಸಿಎಮ್ ಸಿದ್ಧರಾಮಯ್ಯ ಹೇಳಿದರು.
ಅವರು, ತಾಲೂಕಿನ ಮೇಳವಂಕಿ ಹಾಗೂ ಲೋಳಸೂರ ಗ್ರಾಮದಲ್ಲಿ ನಿರಾಶ್ರಿತರನ್ನುದ್ದೇಶಿಸಿ ಮಾತನಾಡಿ, ವಾಸ್ತವ್ಯ ಮಾಡಲು ಯೋಗ್ಯವಲ್ಲದ ಗ್ರಾಮಗಳನ್ನು ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ ಸರ್ಕಾರದ ಗಮನಕ್ಕೂ ತರುತ್ತೇನೆ ಎಂದರು.
ಮನೆಗಳಿಗೆ ನೀಡಿದ ಪರಿಹಾರ ಸಾಲದು ಇನ್ನೂ ಹೆಚ್ಚು ಪರಿಹಾರ ಸರ್ಕಾರ ನೀಡಬೇಕು, ಒಂದು ಮನೆ ಕಟ್ಟಿಕೊಳ್ಳಲು ಹತ್ತು ಲಕ್ಷ ಪರಿಹಾರ ಕೊಡಬೇಕು. ಇದನ್ನ ಸರ್ಕಾರ ಮಾಡಲೇಬೇಕು ಇದಕ್ಕಿಂತ ದೊಡ್ಡ ಕೆಲಸ ಸರ್ಕಾರದು ಬೇರೆನೂ ಇಲ್ಲ. ಮನುಷ್ಯರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಒಂದು ಎಕರೆ ಬೆಳೆ ಹಾನಿಗೆ ಐದು ಸಾವಿರ ಪರಿಹಾರ ರೈತರಿಗೆ ಸಾಲುವದಿಲ್ಲ. ರೈತ ಕುಟುಂಬಗಳಿಗೆ ಒಂದು ಎಕರೆಗೆ ಐವತ್ತು ಸಾವಿರ ಬೆಳೆ ಹಾನಿಗೆ ಸರ್ಕಾರ ನೀಡಬೇಕು ಅಲ್ಲದೇ ಒಂದು ಮನೆಯಲ್ಲಿ ಇಬ್ಬರು ಅಣ್ಣತಮ್ಮಂದಿರು ಇದ್ದರೆ. ಅಂತಹ ಸಹೋದರರಿಗೆ ಪ್ರತ್ಯೇಕ ಮನೆ ಕೊಡುವಂತೆ ಒತ್ತಾಯಿಸುತ್ತೇನೆ.
ನಾನು ಬೆಂಗಳೂರು ಹೋದಮೇಲೆ ಸರ್ಕಾರಕ್ಕೂ ಒತ್ತಾಯ ಮಾಡುತ್ತೇವೆ. ಸ್ಫಂಧಿಸದಿದ್ದಲ್ಲಿ ಒಂದು ದಿನದ ಕಾಲ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಯಡಿಯೂರಪ್ಪ ನವರಿಗೆ ಒತ್ತಡ ಹಾಕುತ್ತೇವೆ, ನಿಮಗೆ ಪರಿಹಾರ ಕೊಡಿಸಲು ಯಡಿಯೂರಪ್ಪ ಕಿವಿ ಹಿಂಡಿ ಕೇಳುತೇವೆ