ಗೋಕಾಕ:ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ
ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ಮನವಿ
ಗೋಕಾಕ ಜು 20: ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ವತಿಯಿಂದ ನಗರದ ಮಿನಿ ವಿಧಾನ ಸೌಧದಲ್ಲಿ ತಾಲೂಕಾಧ್ಯಕ್ಷ ಭೀಮಶಿ ಗದಾಡಿ ನೇತ್ರತ್ವದಲ್ಲಿ ಗ್ರೇಡ-2 ತಹಶೀಲದಾರ ಎಸ್.ಕೆ.ಕುಲಕರ್ಣಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಅರ್ಪಿಸಿದರು.
ಬಲದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿಗಾಗಿ ಪರದಾಡು ಪರಿಸ್ಥಿತಿ ಬಂದೊಗಿದ್ದು, ನೀರಿನ ಅನಾನುಕೂಲತೆಯಿಂದ ಈ ವ್ಯಾಪ್ತಿಯಲ್ಲಿ ವಾಸಿಸುವ ಜನತೆ ಗೂಳೆ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತತಕ್ಷಣ ಹಿಡಕಲ್ ಜಲಾಶಯದಿಂದ 15 ದಿನಗಳ ವರೆಗೆ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಬೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಚೂನಪ್ಪ ಪೂಜೇರಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ, ರೈತ ಸಂಘದ ತಾಲೂಕಾ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ, ಮುಖಂಡರಾದ ಸಿದ್ಲಿಂಗ ಪೂಜೇರಿ, ಹಾಲಪ್ಪ ಖಿಲಾರಿ, ಮುತ್ತೇಪ್ಪ ಕುರಬರ, ಗುರುಸಿದ್ದಪ್ಪ ದುರ್ಗಿ, ಮಹಾದೇವ ಗೌಡೇರ, ಮುತ್ತೆಪ್ಪ ಬಾಗನ್ನವರ, ಗುರುನಾಥ ಹುಕ್ಕೇರಿ, ಸಿದ್ದಪ್ಪ ತಪಶಿ, ಪ್ರಕಾಶ ಹಾಲನ್ನವರ, ಮುತ್ತೆಪ್ಪ ಬಾಗನ್ನವರ, ಲಕ್ಷ್ಮಣ ಹೊಸಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.