ಗೋಕಾಕ:ಶರಣರ ಚಿಂತನೆಗಳು ದಿನನಿತ್ಯದ ಬದುಕಿಗೆ ದಾರಿದೀಪಗಳಾಗಿವೆ : ಡಾ|| ಬಿ.ಎಸ್.ಮದಭಾಂವಿ
ಶರಣರ ಚಿಂತನೆಗಳು ದಿನನಿತ್ಯದ ಬದುಕಿಗೆ ದಾರಿದೀಪಗಳಾಗಿವೆ : ಡಾ|| ಬಿ.ಎಸ್.ಮದಭಾಂವಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 30 :
ಶರಣರ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಟವಾಗಿದ್ದು ನಮ್ಮ ದಿನನಿತ್ಯದ ಬದುಕಿಗೆ ದಾರಿದೀಪಗಳಾಗಿವೆ ಎಂದು ನಿವೃತ್ತ ವೈದ್ಯಾಧಿಕಾರಿ ಡಾ|| ಬಿ.ಎಸ್.ಮದಭಾಂವಿ ಹೇಳಿದರು.
ನಗರದ ಡಾ|| ಮದಭಾಂವಿ ಅವರ ಸಭಾ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕ ಹಾಗೂ ಲಿ. ಹಾನಗಲ್ ಶ್ರೀ ಕುಮಾರೇಶ್ವರ ಮತ್ತು ನಾಗನೂರ ಶ್ರೀ ಪ್ರಭುದೇವ ದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣ ವಚನಗಳು ನಿತ್ಯ ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು ಅವುಗಳನ್ನು ಎಲ್ಲರು ಪಾಲಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಲ್‍ಆರ್‍ಜೆ ಕಾಲೇಜಿನ ಪ್ರಾಧ್ಯಾಪಕಿ ಮಹಾನಂದ ಪಾಟೀಲ ಮಾತನಾಡುತ್ತಾ, ಮೂಡನಂಬಿಕೆ, ಅವೈಜ್ಞಾನಿಕ ಆಚರಣೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶರಣ ವಚನಗಳು ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿವೆ. ಅವುಗಳನ್ನು ನಾವು ಮನಗಂಡು ಮೂಡನಂಬಿಕೆ-ಕಂದಾಚಾರಗಳಿಂದ ಹೊರಬಂದಾಗಲೇ ನೆಮ್ಮದಿಯ ಬದುಕು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ವಹಿಸಿದ್ದರು. ಇದೆ ಸಂದರ್ಭದಲ್ಲಿ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆ ಮೇಲೆ ಗೌರವಾಧ್ಯಕ್ಷ ಎಮ್.ಡಿ.ಚುನಮರಿ, ಪ್ರೊ.ಗಂಗಾಧರ ಮಳಗಿ, ಪ್ರೋ.ಶಿವಲೀಲಾ ಪಾಟೀಲ, ಸೋಮಶೇಖರ ಮಗುದುಮ್ಮ, ಮಹಾಂತೇಶ ತಾವಂಶಿ ಇದ್ದರು. ಈಶ್ವರಚಂದ್ರ ಬೇಟಗೇರಿ ಸ್ವಾಗತಿಸಿ ವಂದಿಸಿದರು.