ಬೆಳಗಾವಿ:ಕೆಎಂಎಫ್ ಅಧ್ಯಕ್ಷರಾಗಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ
ಕೆಎಂಎಫ್ ಅಧ್ಯಕ್ಷರಾಗಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 31 :
ಹಲವು ದಶಕಗಳ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನ ಉತ್ತರಕರ್ನಾಟಕ ಪಾಲಾಗಿದೆ. ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೂತನ ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ತೀವ್ರ ಲಾಬಿ ನಡೆಸಿದ್ದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದರು. ಹಿಂದೆ ಅವರು ಎರಡು ಬಾರಿ ಅಧ್ಯಕ್ಷರಾಗಿದ್ದರು.
16ರಲ್ಲಿ 13 ಮತ ಬಾಲಚಂದ್ರ ಜಾರಕಿಹೊಳಿ ಪರ
ಒಟ್ಟು 14 ಹಾಲು ಒಕ್ಕೂಟದ ಅಧ್ಯಕ್ಷರು 4 ನಮನಿರ್ದೇಶಿತ ಸದಸ್ಯರು ಇರುವ ಒಕ್ಕೂಟ ಮಂಡ್ಯ ಹಾಗೂ ತುಮಕೂರು ಹೊರತು ಪಡಿಸಿ 16 ಸದಸ್ಯರಲ್ಲಿ ರೇವಣ್ಣ, ಭೀಮಾನಾಯ್ಕ್, ಬಂಡೆಪ್ಪ ಕಾಶೆಂಪೂರ್ ಸಹೋದರ ಹೊರತು ಪಡಿಸಿ 13 ಸದಸ್ಯ ಬಲ ಬಾಲಚಂದ್ರ ಜಾರಕಿಹೊಳಿ ಪರವಾಗಿದ್ದರಿಂದ ಶಾಸಕ ಬಾಲಚಂದ್ರ ಅವರ ಆಯ್ಕೆ ಸುಲಭವಾಯಿತು.
ಬಾಲಚಂದ್ರ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
‘ಕೆಎಂಎಫ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಕೆಎಂಎಫ್ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಹಾಲು ಉತ್ಪಾದಕ ರೈತರಿಗೆ ಮತ್ತು ಗ್ರಾಹಕರಿಬ್ಬರಿಗೂ ಲಾಭ ದೊರೆಯಲೆಂದು ಆಶಿಸುತ್ತೇನೆ’ ಎಂದು ಟ್ವೀಟಿಸಿದ್ದಾರೆ.