RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ

ಗೋಕಾಕ:ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ 

ಇಲ್ಲಿಯ ಬಸವೇಶ್ವರ ನಗರದ ಬಲಮೂರಿ ಗಣಪತಿ ದೇವಸ್ಥಾನದಲ್ಲಿ ಪತ್ರಕರ್ತ ಹಾಗೂ ಲೇಖಕ ಸಾಧಿಕ ಹಲ್ಯಾಳ ಬರೆದಿರುವ "ಜಲಪ್ರಳಯ" ಗ್ರಂಥದ ಮುಖಪುಟವನ್ನು ಗಣ್ಯರು ಬಿಡುಗಡೆಗೊಳಿಸಿದರು

ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 31 :

 

 
ಗೋಕಾಕ ನಗರ ಹಿಂದೆಂದು ಕಂಡು ಕಾಣದ ಪ್ರವಾಹ ಪರಿಸ್ಥಿಯನ್ನು ಗ್ರಂಥ ರೂಪದಲ್ಲಿ ಹೊರ ತರುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು
ಶುಕ್ರವಾರ ರಾತ್ರಿ ಇಲ್ಲಿಯ ಬಸವೇಶ್ವರ ನಗರದ ಬಲಮೂರಿ ಗಣಪತಿ ದೇವಸ್ಥಾನದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಶ್ರೀ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮದಲ್ಲಿ ಸ್ಥಳೀಯ ಪತ್ರಕರ್ತ ಹಾಗೂ ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಗೋಕಾಕ ನಗರ ಶತಮಾನದ ಘೋರ ದುರಂತವನ್ನು ಕಂಡು ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಅವರ ಬದುಕು ಕಟ್ಟಿಕೊಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ. ಪ್ರವಾಹ ಪರಿಸ್ಥಿಯನ್ನು ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತ, ಲೇಖಕ ಸಾಧಿಕ ಹಲ್ಯಾಳ ಅವರು ತಾನು ಕಂಡು ಅನುಭವಿಸಿದ ಅನುಭವವನ್ನು ಅಕ್ಷರ ರೂಪದಲ್ಲಿ ಕಟ್ಟಕೊಡುತ್ತಿರುವದು ಒಳ್ಳೆಯ ಬೆಳವಣಿಗೆ ಈ ಗ್ರಂಥ ಮೌಲಿಕ ವಿಷಯಗಳನ್ನು ಹೊತ್ತು ಹೊರಬರಲಿ ಎಂದು ಹಾರೈಸಿದರು
ಜಲಪ್ರಳಯ ಗ್ರಂಥದ ಮುಖಪುಟವನ್ನು ಜಿ.ಪಂ ಸದಸ್ಯ ಮಡೆಪ್ಪ ತೋಳಿನವರ ಬಿಡುಗಡೆಗೋಳಿಸಿದರು
ಈ ಸಂದರ್ಭದಲ್ಲಿ ಪ್ರೋ.ಗಂಗಾಧರ ಮಳಗಿ, ನಿವೃತ್ತ ಉಪನ್ಯಾಸ ಎಂ.ಬಿ.ಕುದರಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಎಂ.ಬಿ.ಪಾಟೀಲ, ಸದಾನಂದ ಕೊಳದುರ್ಗಿ, ಎಂ.ಆರ್.ಅಗಳನ್ನವರ, ಲೇಖಕ ಸಾದಿಕ ಹಲ್ಯಾಳ, ಬಿ.ಆರ್.ಮುರಗೋಡ ಸೇರಿದಂತೆ ಅನೇಕರು ಇದ್ದರು.

Related posts: