RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪ್ರವಾಹದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹ

ಗೋಕಾಕ:ಪ್ರವಾಹದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹ 

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಬಿಜೆಪಿ ಮುಖಂಡ ಅಶೋಕ ಪೂಜಾರಿ

ಪ್ರವಾಹದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 1 :

 

 

ಪ್ರವಾಹದಿಂದ ಹಾನಿಗೆ ಒಳಗಾಗಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸರಕಾರ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.
ರವಿವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೋಕಾಕ ಗ್ರಾಮಹದ್ದಿಯಲ್ಲಿರುವ ಸರಕಾರಿ ಖುಲ್ಲಾ ಜಾಗೆ ರೀ.ಸ.ನಂ. 244/ಎ ಕ್ಷೇತ್ರ 312 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ರಚಿಸಿ ನೀಡಬೇಕು ನೂರು ವರ್ಷಗಳ ಇತಿಹಾಸದಲ್ಲಿಯೇ ಎಂದೂ ನೋಡದ ಬೀಕರ ಪ್ರವಾಹದಿಂದ ತತ್ತರಿಸಿರುವ ಗೋಕಾಕ ನಗರದ ಸುಮಾರು 1/3 ಕ್ಕಿಂತಲೂ ಹೆಚ್ಚಿನ ಭಾಗ ನೆರೆ ಹಾವಳಿಯಿಂದ ಸಂಪೂರ್ಣ ಜಲಾವೃತವಾಗಿತ್ತು.

ಇದರಿಂದ ಸುಮಾರು 2000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮನೆಗಳು ಸಂಪೂರ್ಣ ನಾಶವಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಸುಮಾರು 3000 ಕ್ಕಿಂತಲೂ ಹೆಚ್ಚಿನ ಕುಟುಂಬಗಳು ವಾಸಿಸಲು ಬಾಡಿಗೆ ಮನೆಗಳು ದೊರೆಯದೆ ಪರದಾಡುತ್ತಿದ್ದು, ಗುಡಿ ಗುಂಡಾರಗಳಲ್ಲಿ ಜೀವನಸಾಗಿಸುತ್ತಿದ್ದಾರೆ. ಗೋಕಾಕ ನಗರದಲ್ಲಿಯಂತೂ ಸುಮಾರು 8 ರಿಂದ 10 ಸಾವಿರ ಕುಟುಂಬಗಳು ಸ್ವಂತ ಜಾಗೆ ಮತ್ತು ಮನೆ ಇಲ್ಲದೇ ಇಂದಿಗೂ ಸಹ ದುಬಾರಿ ಬಾಡಿಗೆ ಮನೆಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿಯೂ ಜೀವನಸಾಗಿಸುತ್ತಿದ್ದಾರೆ. ಒಕ್ಕಲುತನ ಉಪಯೋಗದ ಜಮೀನುಗಳ ಬೆಲೆ ಗಗನಕ್ಕೆ ಏರಿದ್ದು, ಅವರ ಸಮ್ಮತಿಯೊಂದಿಗೆ ಸರಕಾರ ಸದರೀ ಜಮೀನುಗಳನ್ನು ಖರೀದಿ ಮಾಡಿ ಸರಕಾರಿ ವಸತಿ ವಿನ್ಯಾಸಗಳನ್ನು ರಚಿಸಿ ನೀಡುವ ಇಚ್ಚಾಶಕ್ತಿಯನ್ನು ಹೊಂದಿಲ್ಲ. ಇದರ ಹಿಂದೆ ನಗರದ ಭೂ ಮಾಫಿಯಾದ ಷಡ್ಯಂತ್ರವು ಇದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಗೋಕಾಕ ಗ್ರಾಮ ಹದ್ದಿಗೆ ಸೀಮಿತವಾಗಿರುವ ನಗರದ ಗೋಕಾಕ ಪಾಲ್ಸ ರಸ್ತೆಗೆ ಹೊಂದಿಕೊಂಡಿರುವ ಬೈರಿಕೊಳ್ಳದ ಎದುರಿಗಿನ ಸರಕಾರಿ ಖುಲ್ಲಾ ಜಾಗೆ ರಿ.ಸ.ನಂ. 244/ಎ ಕ್ಷೇತ್ರ 312 ಎಕರೆ 10 ಗುಂಟೆ ಜಾಗೆಯೂ ಯಾವುದೇ ತರಹದ ಉಪಯೋಗವಿಲ್ಲದೇ ಖುಲ್ಲಾ ಬಿದ್ದಿರುತ್ತದೆ. ಸದರೀ ಜಾಗೆಯನ್ನು ಪ್ರವಾಹದಿಂದ ಮನೆ ಕಳೆಕೊಂಡವರಿಗೆ ಪುನರ್ವಸತಿ ನಿರ್ಮಿಸಲು ಮುಂದಾಗಬೇಕೆಂದು ಅಶೋಕ ಪೂಜಾರಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರಕ್ಕೆ ನಿಯೋಗ : ಈ ಕುರಿತು ಶೀಘ್ರವೇ ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸುವುದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಸಂಬಂಧಪಟ್ಟ ಸಚಿವರು, ಸರಕಾರಿ ಅಧಿಕಾರಿಗಳನ್ನು ಗೋಕಾಕದ ಪ್ರಮುಖರ ನಿಯೋಗದೊಂದಿಗೆ ಬೇಟಿಯಾಗಿ ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.
ಸರಕಾರದ ವಿರುದ್ಧ ಹೋರಾಟ : ಪ್ರವಾಹ ಪೀಡಿತ ಜನರಿಗೆ ಸರಕಾರ ಪುನರ್ವಸತಿ ಕಲ್ಪಿಸಲು ಹಿಂದೆಟ್ಟು ಹಾಕಿದರೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧವು ಸಹ ಹೋರಾಟ ಮಾಡಲು ಸಿದ್ದವಿದು,ಸರಕಾರ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸವವರೆಗೆ ಮುಂದುವರೆಸಲಾಗುವದು ಈ ಹೋರಾಟ ಪಕ್ಷಾತೀತವಾಗಿ ಕೈಗೋಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಅಶೋಕ ಮನವಿ ಮಾಡಲಾಗುವದು ಎಂದು ಅಶೋಕ ಪೂಜಾರಿ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಪ್ರೋ. ಎ.ವಾಯ್. ಪಂಗಣ್ಣವರ, ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲವಾನ, ನಿಂಗಪ್ಪ ಅಮ್ಮಿನಭಾಂವಿ ಮುಂತಾದವರು ಉಪಸ್ಥಿತರಿದ್ದರು.

Related posts: