ಗೋಕಾಕ:ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳು ತಕ್ಷಣ ದುರಸ್ದಿ : ಸಚಿವ ಸಚಿವ ಮಾಧುಸ್ವಾಮಿ
ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳನ್ನು ತಕ್ಷಣ ದುರಸ್ದಿ : ಸಚಿವ ಸಚಿವ ಮಾಧುಸ್ವಾಮಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 4 :
ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳನ್ನು ತಕ್ಷಣದಲ್ಲಿ ದುರಸ್ದಿಗೋಳಿಸಲಾಗುವದು ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದರು
ಬುಧವಾರದಂದು ಪ್ರವಾಹದಿಂದ ಹಾನಿಗೆ ಒಳಗಾದ ನಗರದ ಸಣ್ಣ ನೀರಾವರಿ ಇಲಾಖೆ ಗಟ್ಟಿ ಬಸವಣ್ಣ ಯಾತ ನೀರಾವರಿ ಯೋಜನೆಯಲ್ಲಿ ನಿರ್ಮಿಸಿದ ಚಿಕ್ಕಡ್ಯಾಂ ವಿಕ್ಷಣೆ ನಡೆಯಿಸಿ ಮಾತನಾಡಿದ ಅವರು ಪ್ರವಾಹದಿಂದ ನೀರಾವರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸುಮಾರು 450 ಕೋಟಿ ನಷ್ಟು ಹಾನಿಯಾಗಿದೆ ಬೆಳಗಾವಿ ಜಿಲ್ಲೆ ಒಂದಲ್ಲಿ ಸುಮಾರು 54 ಕೋಟಿ ರೂ ಹಾನಿಯಾಗಿದೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಶೀಘ್ರದಲ್ಲೇ ಹಾನಿಗೆ ಒಳಗಾದ ಚಿಕ್ಕಡ್ಯಾಂಗಳನ್ನು ದುರಸ್ಥಿಗೋಳಿಸುವ ಕಾರ್ಯ ಪ್ರಾರಂಭಿಸಲಾಗುವದು. ಗಟ್ಟ ಬಸವಣ್ಣ ಚಿಕ್ಕಡ್ಯಾಂ ಹೇಳಿಕೋಳುವಷ್ಟು ಪ್ರಮಾಣದಲ್ಲಿ ಹಾನಿಗೆ ಒಳಗಾಗಿಲ್ಲ ಪಂಫಸೆಟಗಳು ಹಾನಿಯಾಗಿವೆ ತಕ್ಷಣದಲ್ಲಿ ಅವುಗಳನ್ನು ದುರಸ್ಥಿಗೋಳಿಸಿ ನೀರು ತಡೆಯಲು ಎಲ್ಲ ರೀತಿಯ ಕ್ರಮ ಕೈಗೋಳ್ಳಲಾಗುವದು ಎಂದು ಸಚಿವರು ಹೇಳಿದರು
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ , ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಕಡಬೂರ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು