RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಕೊಣ್ಣೂರ ಪುರಸಭೆಯಿಂದ ನಿರಾಶ್ರಿತರ ಸಮೀಕ್ಷೆ

ಗೋಕಾಕ:ಕೊಣ್ಣೂರ ಪುರಸಭೆಯಿಂದ ನಿರಾಶ್ರಿತರ ಸಮೀಕ್ಷೆ 

ಕೊಣ್ಣೂರ ಪುರಸಭೆಯಿಂದ ನಿರಾಶ್ರಿತರ ಸಮೀಕ್ಷೆ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 8 :

 

 
ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿ ದೀನದಯಾಳ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಬಿಯಾನ ಯೋಜನೆಯಡಿ ನಗರದ ವಸತಿ ರಹಿತ ನಿರಾಶ್ರಿತರನ್ನು ಗುರುತಿಸುವ ಪ್ರಯುಕ್ತ ದಿ. 5ರಂದು ರಾತ್ರಿ 9 ಘಂಟೆಯಿಂದ ಬೆಳಿಗ್ಗೆ 6 ಘಂಟೆಯವರೆಗೆ ರ್ಯಾಪಿಡ್ ಸಮೀಕ್ಷೆಯನ್ನು ಪುರಸಭೆ ಕೊಣ್ಣೂರ ಹಾಗೂ ರಾಮದುರ್ಗದ ಆದರ್ಶ ಫೌಂಡೇಶನ್ ಸಹಯೋಗದೊಂದಿಗೆ ಕೈಗೊಳ್ಳಲಾಯಿತು.
ಕೊಣ್ಣೂರ ಪಟ್ಟಣದ ಪ್ರಮುಖ ಸ್ಥಳಗಳಾದ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣಗಳು, ಗೋಕಾಕ ಫಾಲ್ಸ್ ಕಾರ್ ಪಾರ್ಕಿಂಗ್, ಮಾಣಿಕವಾಡಿ ದೇವಸ್ಥಾನಗಳ ಆವರಣಗಳಲ್ಲಿ ತಂಗಿರುವ ನಿರಾಶ್ರಿತರ ವಿವರಗಳನ್ನು ಸಂಗ್ರಹಿಸಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ಎಸ್.ಎಂ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ನಡೆದ ಸಮೀಕ್ಷೆಯಲ್ಲಿ ಸಿಬ್ಬಂದಿಗಳಾದ ಸಮುದಾಯ ಸಂಘಟನಾಧಿಕಾರಿ ಸಂಪತರಾವ ಕುರಣೆ ಮತ್ತು ಸಮುದಾಯ ಸಂಘಟಕ ಎಂ.ಎ.ಪೆದಣ್ಣವರ ಮತ್ತು ಆದರ್ಶ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿ ಇದ್ದರು.

Related posts: